ಕೇರಳ ರಾಜ್ಯಕ್ಕೆ 2 ವಿಮಾನ ಆಗಮನ, ಯುಎಇಯಿಂದ ತವರಿಗೆ ಮರಳಿದ ಭಾರತೀಯರು

ಕೊರೋನಾ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್ಡೌನ್ ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಇತಿಹಾಸದ ಅತೀದೊಡ್ಡ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಗುರುವಾರದಿಂದ ಆರಂಭವಾಗಿದೆ. 
ಯುಎಇಯಿಂದ ಕೇರಳ ರಾಜ್ಯಕ್ಕೆ ಬಂದಿಳಿದ ಭಾರತೀಯರು
ಯುಎಇಯಿಂದ ಕೇರಳ ರಾಜ್ಯಕ್ಕೆ ಬಂದಿಳಿದ ಭಾರತೀಯರು

ನವದೆಹಲಿ: ಕೊರೋನಾ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್ಡೌನ್ ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಇತಿಹಾಸದ ಅತೀದೊಡ್ಡ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಗುರುವಾರದಿಂದ ಆರಂಭವಾಗಿದೆ. 

ಅಬುಧಾಬಿ ಹಾಗೂ ದುಂಬೈನಿಂದ 354 ಪ್ರಯಾಣಿಕರನ್ನು ಹೊತ್ತ 2 ವಿಮಾನಗಳು ಕೇರಳ ರಾಜ್ಯಕ್ಕೆ ಕಳೆದ ರಾತ್ರಿ ಬಂದಿಳಿದಿವೆ. 

177 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್'ಪ್ರೆಸ್ ಮೊದಲ ವಿಮಾನ 10.9ಕ್ಕೆ ಕೊಚ್ಚಿಗೆ ಬಂದಿಳಿದಿರೆ, ಇಷ್ಟೇ ಸಂಖ್ಯೆ ಪ್ರಯಾಣಿಕರನ್ನು ಕರೆತಂದ ಮತ್ತೊತಂದು ವಿಮಾನ ರಾತ್ರಿ 10.32ಕ್ಕೆ ಕಲ್ಲಿಕೋಟೆಗೆ ಬಂದಿಳಿಯಿತು. 

ಹೀಗೆ ಬಂದವರಲ್ಲಿ 9 ಹಸುಗೂಸುಗಳು, 49 ಗರ್ಭಿಣಿಯರು ಸೇರಿದ್ದರು. ಭಾರತಕ್ಕೆ ಬಂದಿಳಿದ 354 ಜನರ ಪೈಕಿ ಗರ್ಭಿಣಿಯರು ಸೇರಿ ಅನಿವಾರ್ಯವಿರುವವರಿಗೆ ಅಗತ್ಯ ತಪಾಸಣೆ ನಡೆಸಿ ಮನೆಗೆ ಕಳುಹಿಸಿ, ಉಳಿದವರನ್ನು 14 ದಿನಗಳ ಕಾಲ ಕ್ವಾರಂಟೈನ್'ಗೆ ಕಳುಹಿಸಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com