ನಾಚಿಕೆಯಾಗಬೇಕು ನಮಗೆ: ಔರಂಗಾಬಾದ್ ರೈಲು ದುರಂತಕ್ಕೆ ರಾಹುಲ್ ಪ್ರತಿಕ್ರಿಯೆ

ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಇಂದು ಬೆಳಗ್ಗೆ 5 ಗಂಟೆ ವೇಳೆಗೆ ಗೂಡ್ಸ್​ ರೈಲು ಹರಿದು ಮಧ್ಯಪ್ರದೇಶದ 16 ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಇಂದು ಬೆಳಗ್ಗೆ 5 ಗಂಟೆ ವೇಳೆಗೆ ಗೂಡ್ಸ್​ ರೈಲು ಹರಿದು ಮಧ್ಯಪ್ರದೇಶದ 16 ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಮಿಕರು ಸಾವನ್ನಪ್ಪಿರುವ ವಿಷಯ ಕೇಳಿ ನನಗೆ ಆಘಾತವಾಯಿತು, ವಲಸೆ ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿರುವ ಅವರು ಈ ಪ್ರಕರಣದಿಂದ ನಮಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.

ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಮಧ್ಯಪ್ರದೇಶ ಸರ್ಕಾರ 5 ಲಕ್ಷ ರೂ. ಪರಿಹಾರ ಧನ ಘೋಷಿಸಿದೆ.  

ಲಾಕ್​ಡೌನ್​ನಿಂದ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ  ಮಧ್ಯಪ್ರದೇಶದ ಕಾರ್ಮಿಕರು ರೈಲ್ವೆ ಹಳಿಯನ್ನು ಅನುಸರಿಸಿ ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಸುಸ್ತಾದ ಕಾರ್ಮಿಕರು ವಿಶ್ರಾಂತಿಗೆಂದು ನಿನ್ನೆ ರಾತ್ರಿ ಹಳಿಯ  ಮೇಲೆ ಮಲಗಿದ್ದರು. ಇಂದು ಬೆಳಗ್ಗೆ ಜಾಲ್ನಾದಿಂದ ಔರಂಗಾಬಾದ್​ನತ್ತ ತೆರಳುತ್ತಿದ್ದ ಗೂಡ್ಸ್​ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ 16 ಕಾರ್ಮಿಕರು ಸಾವನ್ನಪ್ಪಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com