ಎಲ್ ಒಸಿಯಲ್ಲಿ ಗುಂಡಿನ ದಾಳಿ
ಎಲ್ ಒಸಿಯಲ್ಲಿ ಗುಂಡಿನ ದಾಳಿ

ಕದನ ವಿರಾಮ ಉಲ್ಲಂಘನೆ: ದಿಟ್ಟ ಉತ್ತರ ನೀಡಿದ ಭಾರತ; ಪಾಕಿಸ್ತಾನದ 3 ಸೈನಿಕರು ಹತ, ನಾಲ್ಕು ಪೋಸ್ಟ್ ಗಳು ಧ್ವಂಸ

ಕಳೆದೊಂದು ವಾರದಿಂದ ಅಪ್ರಚೋದಿತ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನಿ ಸೈನಿಕರಿಗೆ ಭಾರತೀಯ ಸೇನೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದು, ಭಾರತ ನಡೆಸಿದ ಪ್ರತಿದಾಳಿಯಲ್ಲಿ ಮೂರು ಸೈನಿಕರು ಸಾವನ್ನಪ್ಪಿದ್ದು, ಪಾಕ್ ಸೇನೆಯ ಕನಿಷ್ಢ  4 ಪೋಸ್ಟ್ ಗಳು ಧ್ವಂಸವಾಗಿವೆ ಎಂದು ತಿಳಿದುಬಂದಿದೆ.

ಶ್ರೀನಗರ: ಕಳೆದೊಂದು ವಾರದಿಂದ ಅಪ್ರಚೋದಿತ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನಿ ಸೈನಿಕರಿಗೆ ಭಾರತೀಯ ಸೇನೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದು, ಭಾರತ ನಡೆಸಿದ ಪ್ರತಿದಾಳಿಯಲ್ಲಿ ಮೂರು ಸೈನಿಕರು ಸಾವನ್ನಪ್ಪಿದ್ದು, ಪಾಕ್ ಸೇನೆಯ ಕನಿಷ್ಢ  4 ಪೋಸ್ಟ್ ಗಳು ಧ್ವಂಸವಾಗಿವೆ ಎಂದು ತಿಳಿದುಬಂದಿದೆ.

ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ 3 ದಿನಗಳಿಂದ ಪಾಕ್ ಸೇನೆ ನಡೆಸುತ್ತಿರುವ ಗುಂಡಿನ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಈ ವೇಳೆ ಭಾರತೀಯ ಸೇನೆ ನಡೆಸಿರುವ ಪ್ರತಿದಾಳಿಯಲ್ಲಿ  ಪಾಕ್ ಸೇನೆಯ 3 ರಿಂದ 4  ಸೈನಿಕರು ಹತ್ಯೆಗೀಡಾಗಿದ್ದು, ಐವರು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಪಾಕ್ಸ್ ಸೇನೆಗೆ ಸೇರಿದ 4 ಪೋಸ್ಟ್ ಗಳನ್ನೂ ಕೂಡ ಧ್ವಂಸಗೊಳಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಸೇನಾಧಿಕಾರಿಗಳು ಬಾಲಕೋಟ್ ಸೇರಿದಂತೆ ಮೆಂಧರ್ನಲ್ಲಿ ಪಾಕಿಸ್ತಾನ ಹಲವಾರು ಗಂಟೆಗಳ ಕಾಲ ಕದನ ವಿರಾಮ ಉಲ್ಲಂಘನೆ ನಡೆಸಿದ್ದು, ಇದೆ ಕಾರಣದಿಂದ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿದೆ ಎಂದು ಹೇಳಿದ್ದಾರೆ. 

ಕಳೆದ ತಿಂಗಳು ಕೂಡ ಕುಪ್ವಾರಾ ಜಿಲ್ಲೆಯ ರಂಗ್ವಾರ್ ಪ್ರದೇಶದಲ್ಲಿ ಪಾಕ್ ಸೇನೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ಪಾಕಿಸ್ತಾನ ಪಡೆಗಳು ಪೂಂಚ್ ಮತ್ತು ಕಥುವಾ ಜಿಲ್ಲೆಗಳಲ್ಲಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು  ಅಂತರರಾಷ್ಟ್ರೀಯ ಗಡಿ (ಐಬಿ) ಬಳಿ ಗುಂಡಿನ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ 45 ವರ್ಷದ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ಅಂತೆಯೇ ಕಳೆದ ತಿಂಗಳು, ಹಿರಾನಗರ್ ವಲಯದಲ್ಲಿ ಪಾಕಿಸ್ತಾನ ರೇಂಜರ್ಸ್ ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್) ನಡುವೆ  ರಾತ್ರೋರಾತ್ರಿ ಭಾರಿ ಗುಂಡಿನ ಚಕಮಕಿ ನಡೆದಿತ್ತು. 

Related Stories

No stories found.

Advertisement

X
Kannada Prabha
www.kannadaprabha.com