ಕೊರೋನಾ ಲಾಕ್ ಡೌನ್ ನಡುವೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ 40 ಮುಸ್ಲಿಂ ಕುಟುಂಬ!

ಮಹಾಮಾರಿ ಕೊರೋನಾ ಲಾಕ್ ಡೌನ್ ನಡುವೆ 40 ಮುಸ್ಲಿಂ ಕುಟುಂಬದ 250 ಮಂದಿ ಘರ್ ವಾಪಸಿಯಾಗಿದ್ದಾರೆ. ಹೌದು ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ.
ಅಂತ್ಯ ಸಂಸ್ಕಾರದ ಚಿತ್ರ
ಅಂತ್ಯ ಸಂಸ್ಕಾರದ ಚಿತ್ರ

ಹಿಸಾರ್: ಮಹಾಮಾರಿ ಕೊರೋನಾ ಲಾಕ್ ಡೌನ್ ನಡುವೆ 40 ಮುಸ್ಲಿಂ ಕುಟುಂಬದ 250 ಮಂದಿ ಘರ್ ವಾಪಸಿಯಾಗಿದ್ದಾರೆ. ಹೌದು ಇಸ್ಲಾಂ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. 

ಹರಿಯಾಣದ ಹಿಸಾರ್ ಜಿಲ್ಲೆಯ ಬಿದ್ ಮಿರಾ ಎಂಬ ಗ್ರಾಮ ಘರ್ ವಾಪಸಿಗೆ ಸಾಕ್ಷಿಯಾಗಿದೆ. ನಿನ್ನೆ ಮುಸ್ಲಿಂ ಮಹಿಳೆಯೊಬ್ಬರು ಮೃತಪಟ್ಟಿದ್ದು ಬಳಿಕ ಇವರೆಲ್ಲಾ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಆ ನಂತರ ಮಹಿಳೆಯನ್ನು ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಿದ್ದಾರೆ. 

ಮೃತ ಮಹಿಳೆ ಪೂಲಿ ದೇವಿ ಇಸ್ಲಾಂ ಧರ್ಮವನ್ನು ಪ್ರತಿಪಾದಿಸುತ್ತಿದ್ದರು. ಹೀಗಾಗಿ ನಾವೆಲ್ಲಾ ಇಸ್ಲಾಂ ಅನ್ನು ಪಾಲಿಸುತ್ತಿದ್ದೇವು. ಈಕೆ ಸತ್ತ ನಂತರ ಈಕೆಯ ಮಗ ಸೇರಿದಂತೆ 40 ಕುಟುಂಬಗಳು ಹಿಂದೂ ಧರ್ಮವನ್ನು ಸ್ವೀಕರಿಸಿದೆ. ಪೂಲಿ ದೇವಿ ಪುತ್ರ ಸತ್ಬೀರ್ ನಾವು ಸ್ವಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ. 

ನಾವು ಹಿಂದೂ ಧರ್ಮಕ್ಕೆ ಒಳಪಡುವ ದೂಮ್ ಜಾತಿಯವರಾಗಿದ್ದು ನಮ್ಮ ಹಿರಿಯರು ಹಿಂದೂಗಳಾಗಿದ್ದರು. ಆದರೆ ಮೊಘಲ್ ದೊರೆ ಔರಂಗಜೇಬನ ಸಮಯದಲ್ಲಿ ನಮ್ಮ ಪೂರ್ವಜರನ್ನು ಮತಾಂತರ ಮಾಡಲಾಯಿತು ಎಂದು ಸತ್ಬೀರ್ ತಿಳಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com