62 ಸಿಆರ್'ಪಿಎಫ್ ಯೋಧರಿಗೆ ಕೊರೋನಾ ಪಾಸಿಟಿವ್, 234ಕ್ಕೇರಿದ ಸೋಂಕಿತರ ಸಂಖ್ಯೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 62 ಸಿಆರ್'ಪಿಎಫ್ ಯೋಧರಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಭಾನುವಾರ ತಿಳಿದುಬಂದಿದೆ, 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 62 ಸಿಆರ್'ಪಿಎಫ್ ಯೋಧರಿಗೆ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಭಾನುವಾರ ತಿಳಿದುಬಂದಿದೆ, 

ಈ ಕುರಿತು ಸಿಆರ್'ಪಿಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದು, 62 ಮಂದಿ ಯೋಧರಲ್ಲಿ ಕೋರೋನಾ ದೃಢಪಟ್ಟಿದ್ದು, ಇದರಂತೆ ಒಟ್ಟಾರೆ 234 ಯೋಧರಲ್ಲಿ ವೈರಸ್ ಪತ್ತೆಯಾಗಿದೆ ಎಂದು ತಿಳಿಸಿದೆ. 

ಈ ಹಿಂದೆ ಬಿಎಸ್ಎಫ್ ಪಡೆಯ 35 ಯೋಧರದಲ್ಲಿ ವೈರಸ್ ದೃಢಪಟ್ಟಿತ್ತು. ಗಡಿ ಭದ್ರತಾ ಪಡೆಯಲ್ಲಿ ಈ ವರೆಗೂ 250 ಮಂದಿ ಯೋಧರಲ್ಲಿ ಮಹಾಮಾರಿ ವಕ್ಕರಿಸಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com