ಚೀನಾ- ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಲು 'ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ ಪರೀಕ್ಷೆ ನಡೆಸಿದ ಭಾರತ! 

ಚೀನಾ-ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ಉಂಟಾದರೆ ತಕ್ಷಣ ಪರಿಣಮಕಾರಿ ಪ್ರತಿಕ್ರಿಯೆ ನೀಡುವುದಕ್ಕಾಗಿ ತಯಾರಿಸಲಾಗಿರುವ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ ನ್ನು ಭಾರತ ಪರೀಕ್ಷಿಸಿದೆ. 
ಚೀನಾ- ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಲು 'ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ ಪರೀಕ್ಷೆ ನಡೆಸಿದ ಭಾರತ!
ಚೀನಾ- ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಲು 'ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ ಪರೀಕ್ಷೆ ನಡೆಸಿದ ಭಾರತ!

ನವದೆಹಲಿ: ಚೀನಾ-ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ಉಂಟಾದರೆ ತಕ್ಷಣ ಪರಿಣಮಕಾರಿ ಪ್ರತಿಕ್ರಿಯೆ ನೀಡುವುದಕ್ಕಾಗಿ ತಯಾರಿಸಲಾಗಿರುವ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ ನ್ನು ಭಾರತ ಪರೀಕ್ಷಿಸಿದೆ. 

ಈ ಬಗ್ಗೆ ಭಾರತೀಯ ಸೇನಾ ಜನರಲ್ ಮನೋಜ್ ಮುಕುಂದ್ ನರವಾನೆ ಪಿಟಿಐ ಜೊತೆ ಮಾತನಾಡಿದ್ದು, ಚೀನಾ, ಪಾಕಿಸ್ತಾನಗಳೊಂದಿಗಿನ ಭಾರತದ ಗಡಿ ಪ್ರದೇಶದಲ್ಲಿ ಯುದ್ಧದ ವಾತಾವರಣ ಉಂಟಾದರೆ ಕ್ಷಿಪ್ರ ದಾಳಿಗಾಗಿ ಭಾರತ ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ ನ್ನು ತಯಾರಿಸಲಾಗಿದ್ದು ಪರೀಕ್ಷೆಯನ್ನೂ ನಡೆಸಲಾಗಿದೆ. ಆದರೆ ಕೋವಿಡ್-19 ಕಾರಣದಿಂದಾಗಿ ಗಡಿಗಳಲ್ಲಿ ಐಬಿಜಿಯನ್ನು ನಿಯೋಜಿಸಲು ಸಾಧ್ಯವಾಗಿಲ್ಲ. ನಿಗದಿತ ಸಮಯದಲ್ಲಿ ಐಬಿಜಿ ನಿಯೋಜನೆಗೆ ಸಿದ್ಧತೆ ನಡೆಸಲಾಗಿದೆ ಎಂದು ಮನೋಜ್ ಮುಕುಂದ್ ನರವಾನೆ ಹೇಳಿದ್ದಾರೆ. 

ವಾಯುಶಕ್ತಿ, ಫಿರಂಗಿದಳ, ಅಮೌರ್‌ನ್ನು ಒಳಗೊಂಡ ಭಾರತೀಯ ಸೇನೆಯ ಸಣ್ಣ, ಮಧ್ಯಮ ಮತ್ತು ಸ್ವಯಂ ಹೋರಾಟದ ಘಟಕ ಏಕೀಕೃತ ಹೋರಾಟ ಗುಂಪು(ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್(ಐಬಿಜಿ)
ಸೇನಾ ಘಟಕದಲ್ಲಿ ಪ್ರಸ್ತುತ 8-10 ಬ್ರಿಗೇಡ್‌ಗಳಿರುತ್ತದೆ. ಬ್ರಿಗೇಡ್ 800 ಸೈನಿಕರ 3-4 ಬೆಟಾಲಿಯನ್ ಹೊಂದಿರುತ್ತದೆ. ಆದರೆ ಐಬಿಜಿ 6 ಬೆಟಾಲಿಯನ್ ಹೊಂದಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com