ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಿಜೋರಾಂ ಕೊರೋನಾ ಮುಕ್ತ; ವೈರಸ್ ನಿಂದ ಮುಕ್ತಿ ಪಡೆದ ದೇಶದ ಐದನೇ ರಾಜ್ಯ

ದೇಶದಲ್ಲಿ ಕೊರೋನಾ ವೈರಸ್ ನಿಂದ ಮುಕ್ತಿ ಪಡೆದ ಐದನೇ ರಾಜ್ಯ ಎಂಬ ಕೀರ್ತಿಗೆ ಇದೀಗ ಈಶಾನ್ಯ ಭಾರತದ ಮಿಜೋರಾಂ ಪಾತ್ರವಾಗಿದೆ.

ಐಜ್ವಾಲ್: ದೇಶದಲ್ಲಿ ಕೊರೋನಾ ವೈರಸ್ ನಿಂದ ಮುಕ್ತಿ ಪಡೆದ ಐದನೇ ರಾಜ್ಯ ಎಂಬ ಕೀರ್ತಿಗೆ ಇದೀಗ ಈಶಾನ್ಯ ಭಾರತದ ಮಿಜೋರಾಂ ಪಾತ್ರವಾಗಿದೆ.

ದೇಶಾದ್ಯಂತ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಅತ್ತ ಈಶಾನ್ಯ ಭಾರತದ ರಾಜ್ಯಗಳು ಕೊರೋನಾ ವೈರಸ್ ಅನ್ನು ಬಗ್ಗು ಬಡಿದಿದ್ದು, ಕೊರೋನಾ ವೈರಸ್ ಮುಕ್ತವಾಗುತ್ತಿವೆ. ಈ ಪಟ್ಟಿಗೆ ಇದೀಗ ಮಿಜೋರಾಂ ಕೂಡ ಸೇರ್ಪಡೆಯಾಗಿದ್ದು, ಮಿಜೋರಾಂನಲ್ಲಿದ್ದ ಅಂತಿಮ ಕೊರೋನಾ ಸೋಂಕಿತ ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿನ ಝೋರಂ ವೈದ್ಯಕೀಯ ಕಾಲೇಜಿನಲ್ಲಿ ಕಳೆದ 45 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತ ಕೊನೆಗೂ ಗುಣುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಿಜೋರಾಂ ಆರೋಗ್ಯ ಸಚಿವರಾದ ಡಾ.ಆರ್ ಲಲ್ತಾಂಗ್ಲಿಯಾನ ಅವರು, ರಾಜ್ಯ ಏಕೈಕ ಕೊರೋನಾ ಸೋಂಕಿತ ಗುಣಮುಖರಾಗಿದ್ದು, ಶನಿವಾರ ಝೋರಂ ವೈದ್ಯಕೀಯ ಕಾಲೇಜಿನಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಇತ್ತೀಚಿನ 2 ವರದಿಗಳು ಕೊರೋನಾ ನೆಗೆಟಿವ್ ಬಂದಿದೆ. ಹೀಗಾಗಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಆ ಮೂಲಕ ಮಿಜೋರಾಂ ಕೊರೋನಾ ವೈರಸ್ ನಿಂದ ಮುಕ್ತಿ ಪಡೆದ ಈಶಾನ್ಯ ಭಾರತದ ಐದನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳು ಕೊರೋನಾ ವೈರಸ್ ನಿಂದ ಮುಕ್ತವಾಗಿದ್ದವು. 

Related Stories

No stories found.

Advertisement

X
Kannada Prabha
www.kannadaprabha.com