ವಿಶಾಖಪಟ್ನಂ ದುರಂತ ಬೆನ್ನಲ್ಲೇ ಕೈಗಾರಿಕೆಗಳಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಮಾರ್ಗಸೂಚಿ ಪ್ರಕಟ

ವಿಶಾಖಪಟ್ಣಂನ ಅನಿಲ ಸೋರಿಕೆ ದುರಂತದ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ ಡಿಎಂಎಂ) ವಿಸ್ತೃತ ಮಾರ್ಗಸೂಚಿ ಪ್ರಕಟಿಸಿ ಲಾಕ್ ಡೌನ್ ಮುಗಿದ ನಂತರ ಕೈಗಾರಿಕೆಗಳು ಮರು ಆರಂಭವಾಗುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಹಲವು ಮುನ್ನೆಚ್ಚರಿಕೆಗಳನ್ನು, ಸುರಕ್ಷತಾ ಕ್ರಮಗಳನ್ನು ಪ್ರಕಟಿಸಿದೆ.
ಎಲ್ ಜಿ ಪಾಲಿಮರ್ಸ್ ನಿಂದ ಸೋರಿಕೆಯಾದ ಅನಿಲ
ಎಲ್ ಜಿ ಪಾಲಿಮರ್ಸ್ ನಿಂದ ಸೋರಿಕೆಯಾದ ಅನಿಲ

ನವದೆಹಲಿ: ವಿಶಾಖಪಟ್ಣಂನ ಅನಿಲ ಸೋರಿಕೆ ದುರಂತದ ಬೆನ್ನಲ್ಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ ಡಿಎಂಎಂ) ವಿಸ್ತೃತ ಮಾರ್ಗಸೂಚಿ ಪ್ರಕಟಿಸಿ ಲಾಕ್ ಡೌನ್ ಮುಗಿದ ನಂತರ ಕೈಗಾರಿಕೆಗಳು ಮರು ಆರಂಭವಾಗುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಹಲವು ಮುನ್ನೆಚ್ಚರಿಕೆಗಳನ್ನು, ಸುರಕ್ಷತಾ ಕ್ರಮಗಳನ್ನು ಪ್ರಕಟಿಸಿದೆ.


ಈ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಹೊರಡಿಸಿರುವ ಎನ್ ಡಿಎಂಎ, ಕೈಗಾರಿಕೆಗಳು ಮುಚ್ಚಿದ್ದರಿಂದ ಮತ್ತು ಹಲವು ವಾರಗಳ ಲಾಕ್ ಡೌನ್ ನಿಂದಾಗಿ ಹಲವು ಕೈಗಾರಿಕೆಗಳಲ್ಲಿ ನಿರ್ದಿಷ್ಟ ಕಾರ್ಯನಿರ್ವಹಣಾ ವಿಧಾನ ಅಳವಡಿಸುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ . ಹೀಗಾಗಿ ಕೆಲವು ಉತ್ಪಾದನಾ ಸೌಲಭ್ಯಗಳು, ಪೈಪ್‌ಲೈನ್‌ಗಳು, ಕವಾಟಗಳು ಉಳಿದಿರುವ ರಾಸಾಯನಿಕಗಳನ್ನು ಹೊಂದಿರಬಹುದು, ಅದು ಅಪಾಯವನ್ನುಂಟುಮಾಡಬಹುದು ಎಂದು ಹೇಳಿದೆ.

ಕಾರ್ಖಾನೆಗಳಲ್ಲಿ ನಿಯಮ, ಶಿಷ್ಠಾಚಾರಗಳನ್ನು ಹೇಗೆ ಪಾಲಿಸಬೇಕು: ಕಾರ್ಖಾನೆಗಳನ್ನು ಮರು ಆರಂಭಿಸುವಾಗ ಮೊದಲ ವಾರವನ್ನು ಪ್ರಾಯೋಗಿಕ ಅಥವಾ ಪರೀಕ್ಷೆಯ ಸಮಯ ಎಂದು ಎಲ್ಲಾ ಸುರಕ್ಷಿತಾ ವಿಧಾನಗಳನ್ನು ಅಳವಡಿಸಿಕೊಂಡು ನಡೆಸಬೇಕಾಗುತ್ತದೆ. ಕಾರ್ಖಾನೆಗಳು ಅತ್ಯಧಿಕ ಉತ್ಪಾದನೆ ಮಾಡಬೇಕೆಂದು ಈ ಸಮಯದಲ್ಲಿ ಗುರಿ ಇಟ್ಟುಕೊಳ್ಳಬಾರದು. 24 ಗಂಟೆಗಳ ಕಾಲವೂ ಫ್ಯಾಕ್ಟರಿ ಆವರಣದಲ್ಲಿ ಸ್ವಚ್ಛತೆ ನಡೆಸುತ್ತಿರಬೇಕು. ಫ್ಯಾಕ್ಟರಿಯಲ್ಲಿ ಊಟದ ಕೊಠಡಿ ಮತ್ತು ಸಾಮಾನ್ಯ ಟೇಬಲ್ ಗಳಲ್ಲಿ ಪ್ರತಿ ಎರಡು-ಮೂರು ಗಂಟೆಗಳಿಗೊಮ್ಮೆ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸುತ್ತಿರಬೇಕು.


ಕಾರ್ಮಿಕರ ಸುರಕ್ಷತೆಗೆ, ಕೊರೋನಾ ವೈರಸ್ ತಡೆಗೆ ಎನ್ ಡಿಎಂಎ, ಕಾರ್ಖಾನೆಗಳಲ್ಲಿ ನಿರ್ದಿಷ್ಟ ಸಾಧನಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಆಗಾಗ ಕೈಗಳನ್ನು, ದೇಹಗಳನ್ನು ಸ್ವಚ್ಛ ಮಾಡುತ್ತಿರಬೇಕು. ಕಾರ್ಖಾನೆಗಳಲ್ಲಿ ವಿಚಿತ್ರ ಶಬ್ದ, ವಾಸನೆ, ವೈರ್ ಗಳು ತೆರೆದುಕೊಳ್ಳುತ್ತಿದ್ದರೆ, ಕಂಪನ, ಸೋರಿಕೆ, ಹೊಗೆ, ಅಸಹಜ ಕಂಪನ, ಅನಿಯಮಿತ ಗ್ರೈಂಡಿಂಗ್ ಅಥವಾ ಇತರ ಅಪಾಯಕಾರಿ ಚಿಹ್ನೆಗಳು ಕಂಡುಬಂದರೆ ತಕ್ಷಣ ಕಾರ್ಖಾನೆಯ ನಿರ್ವಹಣೆಯ ಅಗತ್ಯವನ್ನು ಸೂಚಿಸುತ್ತವೆ, ಅಗತ್ಯವಿದ್ದರೆ ಕೂಡಲೇ ಕಾರ್ಖಾನೆಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com