ಮುಸ್ಲಿಂರು ಹಿಂದೂ ನಾಗರಿಕತೆಯಲ್ಲಿ ಸಮಾನ ಪಾಲುದಾರರೆಂದು ಆರ್‌ಎಸ್‌ಎಸ್‌ ಪರಿಗಣಿಸುತ್ತದೆ: ಅಖೀಲ್ ಅಹ್ಮದ್

ಆರ್‌ಎಸ್‌ಎಸ್‌ ಮತ್ತು ಅದರ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಕೇವಲ ಒಂದು  ಜಾತಿ ಅಥವಾ ನಂಬಿಕೆಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿರುವ ಪ್ರಖ್ಯಾತ ಮುಸ್ಲಿಂ ವಿದ್ವಾಂಸ ಮತ್ತು ಎನ್ ಸಿಪಿಯುಎಲ್ ನಿರ್ದೇಶಕ ಶೇಖ್ ಅಖೀಲ್ ಅಹ್ಮದ್, ಮುಸ್ಲಿಮರು ಸೇರಿದಂತೆ ದೇಶದ ಎಲ್ಲಾ ವರ್ಗಗಳು ಮತ್ತು ಧರ್ಮಗಳು ಸಮಾನವೆಂದು ಆರ್‌ಎಸ್‌ಎಸ್‌ ಪರಿಗಣಿಸುತ್ತದೆ.
ಮೋಹನ್ ಭಾಗವತ್
ಮೋಹನ್ ಭಾಗವತ್

ನವದೆಹಲಿ: ಆರ್‌ಎಸ್‌ಎಸ್‌ ಮತ್ತು ಅದರ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಕೇವಲ ಒಂದು  ಜಾತಿ ಅಥವಾ ನಂಬಿಕೆಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿರುವ ಪ್ರಖ್ಯಾತ ಮುಸ್ಲಿಂ ವಿದ್ವಾಂಸ ಮತ್ತು ಎನ್ ಸಿಪಿಯುಎಲ್ ನಿರ್ದೇಶಕ ಶೇಖ್ ಅಖೀಲ್ ಅಹ್ಮದ್, ಮುಸ್ಲಿಮರು ಸೇರಿದಂತೆ ದೇಶದ ಎಲ್ಲಾ ವರ್ಗಗಳು ಮತ್ತು ಧರ್ಮಗಳು ಸಮಾನವೆಂದು ಆರ್‌ಎಸ್‌ಎಸ್‌ ಪರಿಗಣಿಸುತ್ತದೆ. ಮಾತ್ರವಲ್ಲ ಈ ಎಲ್ಲಾ ವರ್ಗಗಳು ಹಿಂದೂ ನಾಗರಿಕತೆಯ ಪಾಲುದಾರರು ಮತ್ತು  ಸಾಮಾಜಿಕ ಐಕ್ಯತೆಯಿಂದ ಮಾತ್ರ ಭಾರತ ಸಮೃದ್ಧ ಮತ್ತು ಔನ್ನತ್ಯಕ್ಕೆ ಏರಬಹುದು ಎಂಬ  ದೃಷ್ಟಿಯನ್ನು ಆರ್‌ಎಸ್‌ಎಸ್‌ ಹೊಂದಿದೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್  ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಒಂದು ತಿಂಗಳ ಲಾಕ್ ಡೌನ್ ನಂತರ,  ಏಪ್ರಿಲ್ 26 ರಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಭಾಗವತ್ ಅವರ ಭಾಷಣವನ್ನು ವಿಶ್ಲೇಷಿಸುತ್ತಾ ಡಾ.ಅಹ್ಮದ್ ಈ ಹೇಳಿಕೆ ನೀಡಿದ್ದಾರೆ. ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಡಾ.ಮೋಹನ್ ಭಾಗವತ್, ಆರ್‌ಎಸ್‌ಎಸ್‌ ಒಂದು ಸಮಾಜ ಸೇವಾ  ಸಂಸ್ಥೆಯಾಗಿದ್ದು, ಸಂಘವು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುತ್ವದ ಮೇಲೆ ನಂಬಿಕೆ  ಇಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ. 

ವರ್ಗರಹಿತ ಸಮಾಜವನ್ನು ಸೃಷ್ಟಿಸುವುದು, ಸಮಾಜದ ಏಕೀಕರಣ ಹಾಗೂ ಎಲ್ಲಾ ವರ್ಗಗಳ ಅಭಿವೃದ್ಧಿಯೇ ಸಂಘದ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು. ಸಾರ್ವಜನಿಕ  ಕಲ್ಯಾಣ ಕಾರ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಸ್ಥೆಗಳು ಜಗತ್ತಿನಲ್ಲಿವೆ. ರಾಷ್ಟ್ರೀಯ  ಸ್ವಯಂ ಸೇವಕ ಸಂಘ ಕೂಡ ಭಾರತದಲ್ಲಿ ಅಂತಹ ಒಂದು ಸಾಮಾಜಿಕ ಸಂಘಟನೆಯಾಗಿದೆ. ಜನರ ಸೇವೆ,  ಭಾರತೀಯ ವಿಚಾರಗಳು ಮತ್ತು ಮೌಲ್ಯಗಳ ರಕ್ಷಣೆ ಮತ್ತು ದೇಶಭಕ್ತಿ ಇದರ  ಪ್ರಣಾಳಿಕೆಯಲ್ಲಿರುವ ಮುಖ್ಯ ಅಂಶಗಳಾಗಿವೆ. ಈ ಸಂಘಟನೆ ಬಹಳ ಸುಸಂಬದ್ಧ ಮತ್ತು  ಸಂಘಟಿತವಾಗಿದ್ದು, ಅದರ ವ್ಯಾಪ್ತಿ ಬಹಳ ವಿಸ್ತಾರವಾಗಿದೆ ಎಂದು ಡಾ.ಅಹ್ಮದ್ ಹೇಳಿದರು.

ಸಾಮಾಜಿಕ  ಮತ್ತು ಶೈಕ್ಷಣಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಆರ್‌ಎಸ್‌ಎಸ್‌ ಮಾಡಿರುವ ಪ್ರಮುಖ  ಸಾಧನೆಗಳನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ದೇಶಾದ್ಯಂತ  ಆರ್‌ಎಸ್‌ಎಸ್‌ ನ ಒಂದು ವಿಸ್ತಾರವಾದ ಜಾಲವಿದೆ. ಜನರಲ್ಲಿ ಸಾಮಾಜಿಕ ಜಾಗೃತಿ  ಮೂಡಿಸುವುದು ಮತ್ತು ಅವರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವುದು ಅದರ ಪ್ರಮುಖ  ಉದ್ದೇಶವಾಗಿದೆ ಎಂದು ಅಹ್ಮದ್ ಹೇಳಿದರು. ಭಾರತೀಯತೆ, 'ಸ್ವದೇಶಿ',  ರಾಷ್ಟ್ರೀಯತೆ ಮತ್ತು ಸಾಮಾಜಿಕ ಏಕತೆಗೆ ಈ ಸಂಘಟನೆ ಮಹತ್ವ ನೀಡುತ್ತದೆ. ಬಹುಶಃ ಕೆಲವು  ಜನರು ಈ ಸಂಘಟನೆಯನ್ನು ನಿರ್ದಿಷ್ಟ ಸೈದ್ಧಾಂತಿಕ ದೃಷ್ಟಿಕೋನದ ಮೂಲಕ  ನೋಡುತ್ತಾರೆ.  ಮಾತ್ರವಲ್ಲ ಒಂದು ನಿರ್ದಿಷ್ಟ ವರ್ಗ ಅಥವಾ ಜಾತಿಯೊಂದಿಗೆ  ಜೋಡಿಸಲು  ಪ್ರಯತ್ನಿಸುತ್ತಾರೆ, ಆದರೆ ಆರ್‌ಎಸ್‌ಎಸ್‌ ಯಾವುದೇ ಒಂದು ಧರ್ಮದಲ್ಲಿ ನಂಬಿಕೆ  ಇಟ್ಟಿಲ್ಲ. ಬದಲಾಗಿ ಅದು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುತ್ವದಲ್ಲಿ ನಂಬಿಕೆ  ಇಟ್ಟಿದೆ ಎಂದು ಪ್ರಖ್ಯಾತ ವಿದ್ವಾಂಸರೂ ಆಗಿರುವ ಡಾ. ಅಹ್ಮದ್ ಹೇಳುತ್ತಾರೆ.

ವರ್ಗೇತರ  ಸಮಾಜವನ್ನು ಸೃಷ್ಟಿಸುವುದು ಆರ್‌ಎಸ್‌ಎಸ್‌ನ ಮುಖ್ಯ ಗುರಿಯಾಗಿದೆ. ಸಮಾಜದ ಏಕೀಕರಣ  ಮತ್ತು ಎಲ್ಲಾ ವರ್ಗಗಳ ಅಭಿವೃದ್ಧಿಯು ಅದರ ಕಾರ್ಯಸೂಚಿಯಾಗಿದೆ ಎಂದು ಅವರು ಹೇಳಿದರು. ಡಾ.  ಮೋಹನ್ ಭಾಗವತ್ ಅವರಂತಹ ದೂರದೃಷ್ಟಿಯ ವ್ಯಕ್ತಿ ಆರ್‌ಎಸ್‌ಎಸ್‌ನ ನೇತೃತ್ವವನ್ನು  ವಹಿಸಿಕೊಂಡಾಗಿನಿಂದ, ಸಂಘದ ಆಲೋಚನಾ ವಿಧಾನವನ್ನು ಬಹಳ ಮಟ್ಟಿಗೆ ಅವರು  ಬದಲಾಯಿಸಿದ್ದಾರೆ. ಅವರ ಬೋಧನೆಗಳು ಮತ್ತು ಹೇಳಿಕೆಗಳಲ್ಲಿ ಸುಲಭವಾಗಿ ಕಾಣಬಹುದಾದ  ಸೈದ್ಧಾಂತಿಕ ಮುಕ್ತತೆಯನ್ನು ಅವರು ಹೊಂದಿದ್ದಾರೆ. ಪೂರ್ವಾಗ್ರಹವಿಲ್ಲದೆ ಎಲ್ಲಾ ಭಾರತೀಯ  ಜನರಿಗೆ ಸೇವೆ ಸಲ್ಲಿಸುವಂತೆ ಅವರು ಯಾವಾಗಲೂ ತಮ್ಮ ಸ್ವಯಂಸೇವಕರಿಗೆ ಸೂಚನೆ  ನೀಡಿದ್ದಾರೆ ಎಂದು ಅಹ್ಮದ್ ಹೇಳುತ್ತಾರೆ.

ವ್ಯಕ್ತಿತ್ವ ನಿರ್ಮಾಣ ಮತ್ತು ಸಾಮಾಜಿಕ ಕಲ್ಯಾಣದ ಧ್ಯೇಯದೊಂದಿಗೆ ಭಾರತದಾದ್ಯಂತ ಕಾರ್ಯಾಚರಿಸುತ್ತಿದೆ ಎಂದು ಅವರು ಹೇಳಿದರು.  ಹಿಂದೂಯಿಸಂ  ಎಂಬುದು ಒಂದು  ಧರ್ಮ, ಪ್ರಾಂತ್ಯ ಅಥವಾ ದೇಶದ ಹೆಸರಲ್ಲ, ಆದರೆ ಅದು ಒಂದು  ಸಂಸ್ಕೃತಿಯಾಗಿದೆ. ಇದು ಭಾರತದಲ್ಲಿ ವಾಸಿಸುವ ಜನರ ಪರಂಪರೆಯಾಗಿದೆ, ಆದ್ದರಿಂದ ಇಲ್ಲಿ  ವಾಸಿಸುವ 130  ಕೋಟಿ ಜನರೆಲ್ಲರೂ ಹಿಂದೂಗಳು ಮತ್ತು ಭಾರತ ಮಾತೆಯ ಮಕ್ಕಳೇ ಆಗಿದ್ದಾರೆ.  ವಿವಿಧ  ನಾಗರೀಕತೆಗಳು, ಸಂಸ್ಕೃತಿಗಳು ಮತ್ತು ಧರ್ಮಗಳಿಗೆ ಸೇರಿದವರಾಗಿದ್ದರೂ  ಅವರೆಲ್ಲರೂ ಒಂದೇ ಆಗಿದ್ದಾರೆ. ಏಕೆಂದರೆ ಅವರು ಭಾರತೀಯರು ಮತ್ತು ಈ ವೈವಿಧ್ಯತೆಯು ನಮ್ಮ  ಅಸ್ಮಿತೆಯಾಗಿದೆ ಎಂದು ಅವರು ಹೇಳಿದರು. ಮುಸ್ಲಿಮರು ಇಲ್ಲಿ ಇರಬಾರದು' ಎಂದು  ಹೇಳಲಾದ ದಿನ ಅದು ಹಿಂದುತ್ವವಾಗುವುದಿಲ್ಲ ಎಂದು ಸರ ಸಂಘಚಾಲಕ ಭಾಗವತ್ ಅವರ  ಹೇಳಿಕೆಯನ್ನು ಎಂದು ಡಾ.ಅಹ್ಮದ್ ನೆನಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com