#ವಂದೇ ಭಾರತ್ ಮಿಷನ್: ಇಂಗ್ಲೆಂಡ್​ನಿಂದ ಬೆಂಗಳೂರಿಗೆ 250 ಕನ್ನಡಿಗರು ವಾಪಸ್!

ಭಾರತ ಸರ್ಕಾರದ ಅತೀ ದೊಡ್ಡ ಏರ್ ಲಿಫ್ಟ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ನಡಿಯಲ್ಲಿ ಲಂಡನ್ ನಲ್ಲಿ ನಿರಾಶ್ರಿತರಾಗಿರುವ ಸುಮಾರು 250 ಕನ್ನಡಿಗರು ಮಂಗಳವಾರ ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ.

Published: 10th May 2020 11:13 AM  |   Last Updated: 10th May 2020 11:13 AM   |  A+A-


kannadigas to arrive from london

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಲಂಡನ್: ಭಾರತ ಸರ್ಕಾರದ ಅತೀ ದೊಡ್ಡ ಏರ್ ಲಿಫ್ಟ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ನಡಿಯಲ್ಲಿ ಲಂಡನ್ ನಲ್ಲಿ ನಿರಾಶ್ರಿತರಾಗಿರುವ ಸುಮಾರು 250 ಕನ್ನಡಿಗರು ಮಂಗಳವಾರ ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ.

ಮೇ 7ರಿಂದ ಆರಂಭವಾಗಿರುವ ಮೊದಲ ಹಂತದ ವಂದೇ ಭಾರತ್ ಮಿಷನ್ ಅಡಿ ನಾಳೆ ಇಂಗ್ಲೆಂಡ್​ನಲ್ಲಿ ಸಿಲುಕಿರುವ ಕನ್ನಡಿಗರು ತಾಯ್ನಾಡಿಗೆ ಮರಳುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ವಿವಿಧ ದೇಶಗಳಲ್ಲಿಸಿಲುಕಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್  ಹಮ್ಮಿಕೊಳ್ಳಲಾಗಿದ್ದು, ಭಾನುವಾರ ಇಂಗ್ಲೆಂಡ್ ನಿಂದ ಕರ್ನಾಟಕಕ್ಕೆ 250 ಕನ್ನಡಿಗರು ಬೆಂಗಳೂರಿಗೆ ಬರಲಿದ್ದಾರೆ. ಬೆಳಗ್ಗೆ ಲಂಡನ್ ನಿಂದ ಹೊರಟಿರುವ ವಿಶೇಷ ವಿಮಾನ ರಾತ್ರಿ ಬೆಂಗಳೂರಿಗೆ ಬರಲಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿನೀಡಿದೆ. 

ಲಂಡನ್ ನಿಂದ  ರಾಜ್ಯಕ್ಕೆ ಬರುವ ಕನ್ನಡಿಗರು ಉಳಿದುಕೊಳ್ಳಲು ಹೋಟೆಲ್, ರೆಸಾರ್ಟ್ ಗಳನ್ನು ಬುಕ್ ಮಾಡಲಾಗಿದ್ದು, ಎ,ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ ಮಾಡಲಾಗಿದ್ದು, ಎ ಗ್ರೇಡ್ ಹೊಂದಿರುವವರು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಬಿ ಮತ್ತು ಸಿ ಗ್ರೇಡ್ ಹೊಂದಿರುವವರು  ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದ್ದು, ತಗುಲುವ ವೆಚ್ಚವನ್ನು ಅವರೆ ಭರಿಸಬೇಕಿದೆ.

ಲಾಕ್​ಡೌನ್​ನಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ ಹಮ್ಮಿಕೊಳ್ಳಲಾಗಿದ್ದು, ಮೊದಲ ಹಂತದ ವಂದೇ ಭಾರತ್ ಮಿಷನ್ ಮೇ 13ಕ್ಕೆ ಮುಕ್ತಾಯವಾಗಲಿದ್ದು, ಮೇ 15ರಿಂದ ಎರಡನೇ ಹಂತದ ವಂದೇ ಭಾರತ್ ಮಿಷನ್  ಆರಂಭವಾಗಲಿದೆ. ಮೊದಲ ಹಂತದ ರೀತಿಯಲ್ಲೇ ಎರಡನೇ ಹಂತದಲ್ಲೂ ಸುಮಾರು 15 ಸಾವಿರ ಜನರನ್ನು ಕರೆತರಲಾಗುವುದು.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp