ತನ್ನ ಸುರಕ್ಷತೆಯನ್ನು ಲೆಕ್ಕಿಸದೆ ಪಿಪಿಇ ಕಿಟ್ ತೆಗೆದು ಕೊರೋನಾ ರೋಗಿಯ ಪ್ರಾಣ ಉಳಿಸಿದ ಏಮ್ಸ್ ಆಸ್ಪತ್ರೆ ವೈದ್ಯ, 14 ದಿನಗಳ ಕ್ವಾರಂಟೈನ್ ಗೆ!

ಮಾರಕ ಕೊರೋನಾ ರೋಗಿಯ ಪ್ರಾಣ ಉಳಿಸಲು ತನ್ನ ರಕ್ಷಣೆಗೆ ಹಾಕಿಕೊಂಡಿದ್ದ ಪಿಪಿಇ ಕಿಟ್ ತೆಗೆದು ರೋಗಿಯ ಪ್ರಾಣ ಉಳಿಸಿದ ಏಮ್ಸ್ ಆಸ್ಪತ್ರೆಯ ವೈದ್ಯನನ್ನು 14 ದಿನಗಳ ಕ್ವಾರಂಟೈನ್ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮಾರಕ ಕೊರೋನಾ ರೋಗಿಯ ಪ್ರಾಣ ಉಳಿಸಲು ತನ್ನ ರಕ್ಷಣೆಗೆ ಹಾಕಿಕೊಂಡಿದ್ದ ಪಿಪಿಇ ಕಿಟ್ ತೆಗೆದು ರೋಗಿಯ ಪ್ರಾಣ ಉಳಿಸಿದ ಏಮ್ಸ್ ಆಸ್ಪತ್ರೆಯ ವೈದ್ಯನನ್ನು 14 ದಿನಗಳ ಕ್ವಾರಂಟೈನ್ ಮಾಡಲಾಗಿದೆ.

ಹೌದು.. ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆ ಮೂಲದ ವೈದ್ಯ ಡಾ.ಝಹೀದ್ ಅಬ್ದುಲ್ ಮಜೀದ್ ಎಂಬುವವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ. ರಾತ್ರಿ ಸುಮಾರು 2ಗಂಟೆ ಸುಮಾರಿನಲ್ಲಿ ಕೊರೋನಾ ವೈರಸ್ ನಿಂದ ಗಂಭೀರವಾಗಿದ್ದ ರೋಗಿಯನ್ನು ಏಮ್ಸ್  ಆಸ್ಪತ್ರೆಯ ಟ್ರಾಮಾ ಸೆಂಟರ್ ಗೆ ಸ್ಥಳಾಂತರಿಸಬೇಕಿತ್ತು. ಈ ವೇಳೆ ಆ್ಯಂಬುಲೆನ್ಸ್ ನಲ್ಲಿ ರೋಗಿಯನ್ನು ಮಲಗಿಸಿ ಅವರಿಗೆ ಆಕ್ಸಿಜನ್ ವ್ಯವಸ್ಥೆ ಅಳವಡಿಸಬೇಕಿತ್ತು. ಆದರೆ ರಾತ್ರಿಯಾದ್ದರಿಂದ ಮತ್ತು ಮಂದ ಬೆಳಕಿನ ಕಾರಣದಿಂದಾಗಿ ಅಲ್ಲದೆ ವೈದ್ಯರು ತಮ್ಮ ರಕ್ಷಣೆಗೆ ಹಾಕಿದ್ದ ಪಿಪಿಇ ಕಿಟ್  ನಲ್ಲಿನ ಮುಖ ರಕ್ಷಣಾ ಗ್ಲಾಸ್ ನಿಂದಾಗಿ ಸರಿಯಾಗಿ ಕಾಣಿಸುತ್ತಿರಲಿಲ್ಲ. ರೋಗಿಗೆ ತುರ್ತಾಗಿ ಆಕ್ಸಿಜನ್ ಅಳವಡಿಸಲೇ ಬೇಕಿತ್ತು. ಕೊಂಚ ತಡವಾದರೂ ಅವರು ಸಾಯುವ ಅಪಾಯವಿತ್ತು, ಹೀಗಾಗಿ ಬೇರೆ ದಾರಿ ಇಲ್ಲದೆ ವೈದ್ಯ ಅಬ್ದುಲ್ ಮಜೀದ್ ತಾವು ಧರಿಸಿದ್ದ ರಕ್ಷಣಾ ಮುಖ ಪರದೆಯನ್ನು  ತೆರೆದು ರೋಗಿಗೆ ಆಕ್ಸಿಜನ್ ಅಳವಡಿಸಿದ್ದಾರೆ.

ಬಳಿಕ ರೋಗಿಯನ್ನು ಸುರಕ್ಷಿತವಾಗಿ ಐಸಿಯು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಹೀಗಾಗಿ ಅವರಿಗೂ ವೈರಸ್ ಸೋಂಕು ಹಬ್ಬಿರುವ ಶಂಕೆ ಮೇರೆಗೆ ಅವರನ್ನು 14 ದಿನಗಳ ಕ್ವಾರಂಟೈನ್ ಮಾಡಲಾಗಿದೆ ಎಂದಜು ಏಮ್ಸ್ ಆಸ್ಪತ್ರೆ ಕಾರ್ಯದರ್ಶಿ ಶ್ರೀನಿವಾಸ್ ರಾಜ್ ಕುಮಾರ್ ಅವರು  ಹೇಳಿದ್ದಾರೆ. ಅಲ್ಲದೆ ಮಜೀದ್ ಕಾರ್ಯವನ್ನು ಶ್ಲಾಘಿಸಿರುವ ರಾಜ್ ಕುಮಾರ್ ಅವರು, ದೇಶದ ಹಿತ ದೃಷ್ಟಿಯಿಂದ ಕೆಲವೊಮ್ಮೆ ವೈದ್ಯರೂ ಕೂಡ ಸೈನಿಕರಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com