ಮಾಲ್ಡೀವ್ಸ್ ನಿಂದ ಕೇರಳಕ್ಕೆ ಆಗಮಿಸಿದ ಗರ್ಭಿಣಿ, ಕೆಲವೇ ಗಂಟೆಗಳಲ್ಲಿ ಹೇರಿಗೆ!

ಮಾಲ್ಡೀವ್ಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೇರಳ ಮೂಲದ ದಾದಿಯೊಬ್ಬರು ತಾಯಿನಾಡಿಗೆ ಬರುತ್ತಿದ್ದಂತೆಯೇ ಗಂಡುಮಗುವಿಗೆ ಜನ್ಮ ನೀಡಿದ ಅಪರೂಪದ ಪ್ರಸಂಗ ವರದಿಯಾಗಿದೆ.

Published: 11th May 2020 03:21 PM  |   Last Updated: 11th May 2020 04:05 PM   |  A+A-


ಸಾಂದರ್ಭಿಕ ಚಿತ್ರ

Posted By : Lingaraj Badiger
Source : UNI

ಕೊಚ್ಚಿನ್: ಮಾಲ್ಡೀವ್ಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕೇರಳ ಮೂಲದ ದಾದಿಯೊಬ್ಬರು ತಾಯಿನಾಡಿಗೆ ಬರುತ್ತಿದ್ದಂತೆಯೇ ಗಂಡುಮಗುವಿಗೆ ಜನ್ಮ ನೀಡಿದ ಅಪರೂಪದ ಪ್ರಸಂಗ ವರದಿಯಾಗಿದೆ.

ಸೋನಿಯಾ ಜಾಕೋಬ್ ಮಾಲ್ಡೀವ್ಸ್ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋನಿಯಾ ಸೇರಿದಂತೆ 19 ಮಂದಿ ಗರ್ಭಿಣಿಯರು ಯುದ್ಧನೌಕೆಯಲ್ಲಿ ಕೇರಳದ ಕೊಚ್ಚಿನ್ ಬಂದರಿಗೆ ಕರೆ ತರಲಾಗಿದೆ. 

ಕೊಚ್ಚಿ ಬಂದರಿನಲ್ಲಿ ಇಮಿಗ್ರೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ತಕ್ಷಣ, ಜಾಕೋಬ್ ಅವರಿಗೆ ಅಸ್ವಸ್ಥತೆ ಕಂಡುಬಂತು. ತಕ್ಷಣ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ, ಅವರನ್ನು ಕರೆದೊಯ್ಯಲಾಯಿತು, ಸಿಸೇರಿಯನ್ ಬಳಿಕ ಜಾಕೋಬ್ ಖಾಸಗಿ ಆಸ್ಪತ್ರೆಯಲ್ಲಿ ಅವರು ಗಂಡುಮಗುವಿಗೆ ಜನ್ಮ ನೀಡಿದರು.

ಅವರ ಪತಿ ಶೈನಿ ಕೇರಳದಲ್ಲಿ ನರ್ಸ್ ಆಗಿದ್ದಾರೆ. ಆರು ವರ್ಷ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಇದೇ ಮೊದಲನೇ ಮಗು. ಹೀಗಾಗಿ ಸಂತೋಷಕ್ಕೆ ಪಾರವೇ ಇಲ್ಲ. ಕೊರೋನಾ ಸಂಬಂಧಿ ಪ್ರಯಾಣ ನಿರ್ಬಂಧದಿಂದಾಗಿ ಮಾಲ್ಡೀವ್ಸ್ನಲ್ಲಿ ಸಿಕ್ಕಿಹಾಕಿಕೊಂಡ 698 ಮಂದಿ ಭಾರತೀಯರನ್ನು ಐಎನ್ಎಸ್ ಜಲಾಶ್ವದಲ್ಲಿ ಕರೆತರಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp