ತಮಿಳು ಸುದ್ದಿ ವಾಹಿನಿಯ ನ್ಯೂಸ್ ಆಂಕರ್, ವಿಡಿಯೋ ಎಡಿಟರ್ ಗೆ ಕೋವಿಡ್- 9 ಸೋಂಕು

ತಮಿಳು ಸುದ್ದಿವಾಹಿನಿಯೊಂದರ ಆಂಕರ್ ಮತ್ತು ವಿಡಿಯೋ ಎಡಿಟರ್ ಗೆ ಕೋವಿಡ್-19 ಸೋಂಕು ದೃಢಪಟ್ಟ ಬಳಿಕ 
ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ನೌಕರರ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.

Published: 11th May 2020 03:40 PM  |   Last Updated: 11th May 2020 04:07 PM   |  A+A-


Represenation_image1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಚೆನ್ನೈ: ತಮಿಳು ಸುದ್ದಿವಾಹಿನಿಯೊಂದರ ಆಂಕರ್ ಮತ್ತು ವಿಡಿಯೋ ಎಡಿಟರ್ ಗೆ ಕೋವಿಡ್-19 ಸೋಂಕು ದೃಢಪಟ್ಟ ಬಳಿಕ 
ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ನೌಕರರ ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.

ಎಕ್ಕಟ್ಟುತಂಗಲ್ ನಲ್ಲಿರುವ ಸುದ್ದಿ ವಾಹಿನಿಯ ನ್ಯೂಸ್ ಆಂಕರ್ ಮತ್ತು ನಿರ್ಮಾಪಕರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟ ಬಳಿಕ ಅವರ ಸಂಪರ್ಕದಲ್ಲಿದ್ದ ವಿಡಿಯೋ ಎಡಿಟರ್ ಒಬ್ಬರಿಗೂ ಸೋಂಕು ತಗುಲಿದೆ. 

ಈ ಇಬ್ಬರು ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ. ಅವರ ಸಹೋದ್ಯೋಗಿಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ಇತರ ಕೆಲವರಿಗೂ ಕೋವಿಡ್ -19 ಸೋಂಕು ತಗುಲಿರುವ ಶಂಕೆ ಇದೆ. ಆದರೆ, ಎಷ್ಟು ಜನ ಎಂಬುದು ಈವರೆಗೂ ಅಧಿಕೃತವಾಗಿ ತಿಳಿದುಬಂದಿಲ್ಲ.

Stay up to date on all the latest ರಾಷ್ಟ್ರೀಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp