ಜಪಾನ್ ಮಹಿಳೆಗೆ ಲೈಂಗಿಕ ಕಿರುಕುಳ: ಮೂವರು ಯೋಗ ಗುರುಗಳನ್ನು ಬಂಧಿಸಿದ ಪೊಲೀಸರು!

ಯೋಗಾ ಕಲಿಯಲು ಬಂದ ಜಪಾನ್ ದೇಶದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಮೂವರು ಯೋಗ ಗುರುಗಳು ಜೈಲು ಪಾಲಾಗಿರುವ ಘಟನೆ ಉತ್ತರಾಖಂಡದ ಹೃಷಿಕೇಶದಲ್ಲಿ ಭಾನುವಾರ ನಡೆದಿದೆ.

Published: 11th May 2020 03:29 PM  |   Last Updated: 11th May 2020 03:29 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : UNI

ಡೆಹ್ರಾಡೂನ್: ಯೋಗಾ ಕಲಿಯಲು ಬಂದ ಜಪಾನ್ ದೇಶದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಮೂವರು ಯೋಗ ಗುರುಗಳು ಜೈಲು ಪಾಲಾಗಿರುವ ಘಟನೆ ಉತ್ತರಾಖಂಡದ ಹೃಷಿಕೇಶದಲ್ಲಿ ಭಾನುವಾರ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿಯಂತೆ, ಜಪಾನ್ ದೇಶದ ಮಹಿಳೆಯೊಬ್ಬರು ಹೃಷಿಕೇಶದಲ್ಲಿ ಇದ್ದು, ಅಲ್ಲಿನ ಆಮೇಬಾಗ್ ಪ್ರದೇಶದಲ್ಲಿರುವ ಯೋಗ ಶಾಲೆಯಲ್ಲಿ ಯೋಗಾ ಕಲಿತುಕೊಳ್ಳುತ್ತಿದ್ದಾರೆ. ಯೋಗ ಶಾಲೆಯಲ್ಲಿ ಮೂವರು ಗುರುಗಳಾದ ಹರಿಕೃಷ್ಣ, ಚಂದ್ರಕಾಂತ್, ಸೋಮ್ ರಾಜ್ ಆಕೆಯ ಮೇಲೆ ಕಣ್ಣಾಕಿದರು.

ಆಗಾಗ್ಗೆ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ತಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹಾಕುತ್ತಿದ್ದರು. ಇದರಿಂದ ತೀವ್ರ ಬೇಸರಗೊಂಡ ಸದರಿ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಯೋಗ ಗುರುಗಳ ಲೈಂಗಿಕ ಕಿರುಕುಳವನ್ನು ವಿವರಿಸಿದರು. ಈ ಸಂಬಂಧ ಶನಿವಾರ ಮುನಿ ಕಿ ರೇತಿ ಪೊಲೀಸ್ ಠಾಣೆಯಲ್ಲಿ ಮೂವರು ಗುರುಗಳ ವಿರುದ್ದ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಭಾನುವಾರ ಅವರ ಮನೆಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp