ದೇಶದಲ್ಲಿ ಒಂದೇ ದಿನ 2,500 ಮಂದಿಯಲ್ಲಿ ಕೊರೋನಾ ಪತ್ತೆ, 70,000 ಗಡಿಯತ್ತ ಸೋಂಕಿತರ ಸಂಖ್ಯೆ

ಲಾಕ್'ಡೌನ್ ಸಡಿಲಗೊಂಡ ಬಳಿಕ ಕೊರೋನಾ ವೈರಸ್ ಹಾವಳಿ ಅಧಿಕಗೊಂಡಿದ್ದು, ಸೋಮವಾರ ಮತ್ತೆ ಹೊಸದಾಗಿ 2541 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಭಾರತದಲ್ಲಿ ಸೋಂಕಿತರ ಸೇಖ್ಯೆ 70,000 ಗಡಿಯತ್ತ ಸಾಗುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲಾಕ್'ಡೌನ್ ಸಡಿಲಗೊಂಡ ಬಳಿಕ ಕೊರೋನಾ ವೈರಸ್ ಹಾವಳಿ ಅಧಿಕಗೊಂಡಿದ್ದು, ಸೋಮವಾರ ಮತ್ತೆ ಹೊಸದಾಗಿ 2541 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಭಾರತದಲ್ಲಿ ಸೋಂಕಿತರ ಸೇಖ್ಯೆ 70,000 ಗಡಿಯತ್ತ ಸಾಗುತ್ತಿದೆ. 

ಭಾನುವಾರ 5426 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಸೋಮವಾರ ಹೊಸ ಸೋಂಕಿತರ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಾಗಿದೆ ಂಬುದು ಸಮಾಧಾನಕರ ವಿಚಾರ. 

ಈ ನಡುವೆ ಸೋಮವಾರ ಒಂದೇ ದಿನ ಕೊರೋನಾಗೆ ಬರೋಬ್ಬರಿ 174 ಮಂದಿ ಬಲಿಯಾಗಿದ್ದಾರೆ. ಇದು ದಿನವೊಂದರಲ್ಲಿ ದಾಖಲಾದ ಅತ್ಯಧಿಕ ಸಾವಿನ ಪ್ರಮಾಣವಾಗಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 2217ಕ್ಕೇರಿಕೆಯಾಗಿದೆ. 

ಸೋಮವಾರ ಪತ್ತೆಯಾಗಿರುವ ಪ್ರಕರಣಗಳ ಪೈಕಿ ಮಹಾರಾಷ್ಟ್ರದ ಕೊಡುಗೆಯೇ ಅರ್ಧದಷ್ಟಿದೆ. ಅಲ್ಲಿ ಒಂದೇ ದಿನ 1230 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತಸ ಸಂಖ್ಯೆ 23,401ಕ್ಕೆ ಹೆಚ್ಚಳವಾಗಿದೆ. 36 ಸಾವುಗಳು ಸಂಭವಿಸಿದ್ದು, ಮೃತರ ಸಂಖ್ಯೆ 868ಕ್ಕೆ ಹೆಚ್ಚಳವಾಗಿದೆ. ಈ ನಡುವೆ ಅಹಮದಾಬಾದ್ ನಲ್ಲಿ 268 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 6086ಕ್ಕೆ ಏರಿಕೆಯಾಗಿದೆ. 19 ಸಾವುಗಳು ಸಂಭವಿಸಿದ್ದು, ಕೊರೋನಾಗೆ ಬಲಿಯಾದವರ ಸಂಖ್ಯೆ 400ಕ್ಕೆ ತಲುಪಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com