ವಿಶೇಷ ರೈಲುಗಳಲ್ಲಿ 80 ಸಾವಿರ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್: 16 ಕೋಟಿ ರು. ಹಣ ಸಂಗ್ರಹ

ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು 80 ಸಾವಿರ ಪ್ರಯಾಣಿಕರು ರೈಲ್ವೆ ಟಿಕೆಟ್  ಗಳು ಬುಕ್ ಆಗಿದ್ದು ಅದಕ್ಕಾಗಿ 16 ಕೋಟಿ ಹಣ ಸಂಗ್ರಹವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು 80 ಸಾವಿರ ಪ್ರಯಾಣಿಕರು ರೈಲ್ವೆ ಟಿಕೆಟ್  ಗಳು ಬುಕ್ ಆಗಿದ್ದು ಅದಕ್ಕಾಗಿ 16 ಕೋಟಿ ಹಣ ಸಂಗ್ರಹವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮಂಗಳವಾರದಿಂದ ರೈಲು ಸಂಚಾರ ಆರಂಭಗೊಳ್ಳಲಿದ್ದು, ನವದೆಹಲಿಯಿಂದ ಮದ್ಯಪ್ರದೇಶದ ಬಿಸ್ಲಾಪುರಕ್ಕೆ ರೈಲು ಸಂಚರಿಸಲಿದೆ.ವಿಶೇಷ ರೈಲುಗಳ ಬುಕಿಂಗ್ ಸೋಮವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ.

ಮುಂದಿನ ಏಳು ದಿನಗಳವರೆಗೆ ವಿಶೇಷ ರೈಲುಗಳಿಗಾಗಿ ಇದುವರೆಗೆ 16.15 ಕೋಟಿ ರೂ.ಗಳ 45,533 ಬುಕಿಂಗ್ ದಾಖಲಿಸಲಾಗಿದ್ದು,. ಸುಮಾರು 82,317 ಪ್ರಯಾಣಿಕರು ಈ ಬುಕಿಂಗ್ ನಲ್ಲಿ ಪ್ರಯಾಣಿಸಲಿದ್ದಾರೆ.

ರೈಲ್ವೆ ಇಲಾಖೆ  ಸೋಮವಾರ 15 ವಿಶೇಷ ರೈಲುಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಂಗಳವಾರದಿಂದ ಅನುಷ್ಠಾನಗೊಳ್ಳಲಿದೆ ಪ್ರಯಾಣಿಕರಿಗೆ ತಮಗೆ ಬೇಕಾದ ಆಹಾರ ಕೊಂಡೊಯ್ಯುವಂತೆ ಸೂಚಿಸಿದೆ. ಜೊತೆಗೆ ಆರೋಗ್ಯ ತಪಾಸಣೆಗಾಗಿ ರೈಲು ಹೊರಡುವ ಸುಮಾರು 90 ನಿಮಿಷಗಳ ಮೊದಲು ನಿಲ್ದಾಣಗಳಿಗೆ ಬರಬೇಕೇಂದು ಸೂಚಿಸಿದೆ.

ಜೊತೆಗೆ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದೆ. ಮಂಗಳವಾರದಿಂದ ಸಂಚರಿಸುವ ವಿಶೇಷ ರೈಲುಗಳು ಎಸಿ ಬೋಗಿಗಳಾಗಿವೆ.

ಈ ರೈಲುಗಳ ದರವು ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ದರಕ್ಕೆ ಸಮನಾಗಿರುತ್ತದೆ ಮತ್ತು ಪ್ರಯಾಣಿಕರು ಏಳು ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com