ಲಾಕ್ ಡೌನ್ ವೇಳೆಯಲ್ಲೂ ಅತಿ ಹೆಚ್ಚು ಬೇಡಿಕೆ ಇರುವ 5 ಉದ್ಯೋಗಗಳು! 

ಕೋವಿಡ್-19 ಲಾಕ್ ಡೌನ್ ನಿಂದ ಹಲವಾರು ಉದ್ಯೋಗಗಳಿಗೆ ಕುತ್ತು ಬಂದಿದೆ. ಆದರೆ ಅಚ್ಚರಿಯ ರೀತಿಯಲ್ಲಿ ಒಂದಷ್ಟು ಉದ್ಯೋಗಗಳಿಗೆ ಲಾಕ್ ಡೌನ್ ನಡುವೆಯೂ ಅತ್ಯಂತ ಹೆಚ್ಚು ಬೇಡಿಕೆ ಬಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋವಿಡ್-19 ಲಾಕ್ ಡೌನ್ ನಿಂದ ಹಲವಾರು ಉದ್ಯೋಗಗಳಿಗೆ ಕುತ್ತು ಬಂದಿದೆ. ಆದರೆ ಅಚ್ಚರಿಯ ರೀತಿಯಲ್ಲಿ ಒಂದಷ್ಟು ಉದ್ಯೋಗಗಳಿಗೆ ಲಾಕ್ ಡೌನ್ ನಡುವೆಯೂ ಅತ್ಯಂತ ಹೆಚ್ಚು ಬೇಡಿಕೆ ಬಂದಿದೆ. 

ಟೈಮ್ಸ್ ಜಾಮ್ಸ್ ಇತ್ತೀಚೆಗೆ ಕೋವಿಡ್-19 ರಿಂದ ಉದ್ಯೋಗಗಳ ಮೇಲೆ ಉಂಟಾಗಿರುವ ಪರಿಣಾಮಗಳನ್ನು ಅರಿಯುವುದಕ್ಕೆ ನಡೆಸಿರುವ ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ. 

ಭಾರತದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ ಆರ್ ಪ್ರೊಫೆಷನಲ್ ಗಳಿಂದ 1,345 ಪ್ರತಿಕ್ರಿಯೆಗಳು ಬಂದಿದ್ದು ರಿಮೋಟ್ ವರ್ಕಿಂಗ್ (ಕಚೇರಿಯಿಂದ ದೂರವಾಗಿದ್ದುಕೊಂಡು ಕೆಲಸ ಮಾಡುವವರು) ಪ್ರೊಫೆಷನಲ್ ಗಳಿಗಾಗಿ ಬೇಡಿಕೆ ಹೆಚ್ಚಿದೆ ಎಂದು ಶೇ.55 ರಷ್ಟು ಮ್ಯಾನೇಜರ್ ಗಳು ಹೇಳಿದ್ದಾರೆ. ಬೇಡಿಕೆ ಹೆಚ್ಚಿದೆ ಎಂದು ಹೇಳಿರುವವರ ಪೈಕಿ ಶೇ.33 ರಷ್ಟು ಜನರು ಮಾರ್ಚ್ ನಿಂದ ಏಪ್ರಿಲ್ ವರೆಗೆ ಇಂತಹ ಉದ್ಯೋಗಗಿಳ ಬೇಡಿಕೆಗೆ ಶೇ.20-30 ವರೆಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.  

ಶೇ.24 ಹೆಚ್ ಆರ್ ಪ್ರೊಫೆಷನಲ್ ಗಳ ಪ್ರಕಾರ ಲಾಕ್ ಡೌನ್ ಮುಕ್ತಾಯಗೊಂಡ ನಂತರವೂ ಕಚೇರಿಯಿಂದ ದೂರವಾಗಿದ್ದುಕೊಂಡು ಕೆಲಸ ಮಾಡುವ ಉದ್ಯೋಗಿಗಳ ಬೇಡಿಕೆ ಶೇ.10-20 ರಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸುತ್ತಿದ್ದಾರೆ. 

ಐಟಿ ಕ್ಷೇತ್ರ, ಸಂಶೋಧನೆ ಮತ್ತು ಅಭಿವೃದ್ಧಿ ಮಾರುಕಟ್ಟೆ ವಿಭಾಗಗಳಲ್ಲಿ ಈ ರೀತಿಯ ಉದ್ಯೋಗಗಳು ಹೆಚ್ಚು ಕಂಡುಬರಲಿದೆ. ಉದ್ಯೋಗಿಗಳಿಗಾಗಿ ಬೇಡಿಕೆ ಹೆಚ್ಚಲಿರುವ ಉಳಿದ ಕ್ಷೇತ್ರಗಳ ಬಗ್ಗೆ ಮಾಹಿತಿ ಇಂತಿದೆ

ಕಂಟೆಂಟ್ ರೈಟರ್
ಡಿಜಿಟಲ್ ಮಾರ್ಕೆಟಿಂಗ್ ಪ್ರೊಫೆಷನಲ್ಸ್ 
ಸಂಶೋಧನೆ ಮತ್ತು ಅಭಿವೃದ್ಧಿ 
ಲಾಜಿಸ್ಟಿಕ್ಸ್ ಮ್ಯಾನೇಜರ್
ಸಿಸ್ಟಂ ಆಪರೇಟರ್ ಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com