ಲಾಕ್ ಡೌನ್ ಸಂಕಷ್ಟ: ಮುಸ್ಲಿಂ ಸಮುದಾಯದ ಜನರಿಂದ ಹಿಂದೂ ವ್ಯಕ್ತಿಯ ಶವ ಸಂಸ್ಕಾರ

ಲಾಕ್ ಡೌನ್ ನಿಂದಾಗಿ ಮೃತನ ಸಂಬಂಧಿಗಳು ಅಂತ್ಯಕ್ರಿಯೆಗೆ ಆಗಮಿಸಲು ಆಗದೆ ಇದ್ದ ಕಾರಣ  ಮುಸ್ಲಿಂ ಸಮುದಾಯದ ಸದಸ್ಯರು ಸೇರಿ ತಮ್ಮ ಪಕ್ಕದ ಮನೆಯಲ್ಲಿದ್ದ 72 ವರ್ಷದ ಹಿಂದೂ ವೃದ್ದನ ಅಂತಿಮ ವಿಧಿಗಳನ್ನು ನೆರವೇರಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

Published: 13th May 2020 01:19 PM  |   Last Updated: 13th May 2020 06:41 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : PTI

ಮುಂಬೈ: ಲಾಕ್ ಡೌನ್ ನಿಂದಾಗಿ ಮೃತನ ಸಂಬಂಧಿಗಳು ಅಂತ್ಯಕ್ರಿಯೆಗೆ ಆಗಮಿಸಲು ಆಗದೆ ಇದ್ದ ಕಾರಣ  ಮುಸ್ಲಿಂ ಸಮುದಾಯದ ಸದಸ್ಯರು ಸೇರಿ ತಮ್ಮ ಪಕ್ಕದ ಮನೆಯಲ್ಲಿದ್ದ 72 ವರ್ಷದ ಹಿಂದೂ ವೃದ್ದನ ಅಂತಿಮ ವಿಧಿಗಳನ್ನು ನೆರವೇರಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಸೇವ್ರಿ ಪ್ರದೇಶದಲ್ಲಿ ವಾಸವಿದ್ದ ಪಾಂಡುರಂಗ ಉಬಾಳೆ ಎಂಬುವವರು ಕಳೆದ ಕೆಲ ತಿಂಗಳುಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು.  ಅವರು ಸೋಮವಾರ ಸೇವ್ರಿ  ಜಕಾರಿಯಾ ಬಂದರ್ ಪ್ರದೇಶದ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು., ಕೆಲ ವರ್ಷಗಳಿಂದಲೂ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ತನ್ನ ಪತ್ನಿ ಹಾಗೂ ಮಕ್ಕಳೊಡನೆ ವಾಸವಿದ್ದ ಪಾಂಡುರಂಗ  ಅವರ ಮರಣದ ನಂತರ, ಅವರ ಸಂಬಂಧಿಕರು ಮುಂಬೈ ಉಪನಗರ ಮುಲಂದ್ ಪಕ್ಕದ ನವೀ ಮುಂಬಯಿಯಲ್ಲಿರುವ ಬೇಲಾಪುರ ಮತ್ತು ರಾಯಘಡದಲ್ಲಿದ್ದವರಿಗೆ ವಿಚಾರ ತಲುಪಿಸಲಾಗಿದೆ.

ಆದರೆ ದೇಶಾದ್ಯಂತ ಕೊರೋನಾ ಲಾಕ್ ಡೌನ್ ಇರುವ ಕಾರಣದಿಂದ ಅಂತ್ಯಕ್ರಿಯೆಗೆ  ಅಗತ್ಯ  ವ್ಯವಸ್ಥೆಗಳನ್ನು ಮಾಡಲು ಮೃತನ ಪತ್ನಿ ಮತ್ತು ಮಗನಿಗೆ ಸಾಧ್ಯವಾಗಿಲ್ಲ. ಆಗ ಅವರು ತಮ್ಮ ನೆರೆಮನೆಯವರೊಡನೆ ಈ ಬಗ್ಗೆ ಹೇಳಿದ್ದಾರೆ. ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಂಬಂಧಿಗಳು ಸಹ ಅಂತ್ಯ ಸಂಸ್ಕಾರಕ್ಕೆ ಆಗಮಿಸಲು ಸಾಧ್ಯವಾಗದ ಹಿನ್ನೆಲೆ ನೆರೆಹೊರೆಯ ಮುಸ್ಲಿಂ ಕುಟುಂಬ ಸದಸ್ಯರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅಲ್ಲದೆ ಅವರೇ ಚಟ್ಟವನ್ನೂ ಸಿದ್ದಪಡಿಸಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನೆರೆಮನೆಯವರಾದ  ಆಸಿಫ್ ಶೇಖ್ ಹೇಳಿದಂತೆ , "ನಾವು ಪಾಂಡುರಂಗ ಚಾಚಾ ಅವರನ್ನು ಬಹಳ ಹಿಂದಿನಿಂದಲೂ ಬಲ್ಲೆವು. ಅವರು ಯಾವಾಗಲೂ ನಮ್ಮ ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ನಾವು ಅವರ ಹಬ್ಬಗಳಲ್ಲಿ ಸಹ ಪಾಲ್ಗೊಳ್ಲುತ್ತಿದ್ದೆವು. ನಾವೆಲ್ಲರೂ ಅವರಿಗೆ ವಿದಾಯ ಹೇಳಲು ಮುಂದಾಗಿದ್ದೇವೆ ಮತ್ತು ಅವರ ಕೊನೆಯ ವಿಧಿಗಳನ್ನು ನಿರ್ವಹಿಸಲು ಸಹಾಯ ಮಾಡಿದ್ದೇವೆ."

ಕಳೆದ ತಿಂಗಳು ಸಹ, ಕೆಲವು ಮುಸ್ಲಿಂ ಜನರು ಉಪನಗರ ಬಾಂದ್ರಾದಲ್ಲಿರುವ ಹಿಂದೂ ಕುಟುಂಬದ ವ್ಯಕ್ತಿಯ ಶವವನ್ನು ಭುಜದ ಮೇಲೆ ಹೊತ್ತು ಶವಸಂಸ್ಕಾರಕ್ಕೆ ಕರೆದೊಯ್ದರು. ಮೃತರ ಸಂಬಂಧಿಕರು  ಲಾಕ್ ಡೌನ್ ನಿಂದಾಗಿ ಅಂತಿಮ ವಿಧಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp