ಶ್ರಮಿಕ್‌ ರೈಲು ನೀಡಿದರೂ ತೀರದ ವಲಸೆ ಕಾರ್ಮಿಕರ ಕಷ್ಟ

ಕೊರೊನಾ ವೈರಸ್‌ ಲಾಕ್‌ಡೌನ್‌ ಘೋಷಣೆಯಾದಾಗಿನಿಂದಲೂ ದೇಶದಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ. 
ವಲಸಿಗ ಕಾರ್ಮಿಕರು
ವಲಸಿಗ ಕಾರ್ಮಿಕರು

ಮುಂಬೈ: ಕೊರೊನಾ ವೈರಸ್‌ ಲಾಕ್‌ಡೌನ್‌ ಘೋಷಣೆಯಾದಾಗಿನಿಂದಲೂ ದೇಶದಲ್ಲಿ ವಲಸೆ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ. 

ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿದ್ದರಿಂದ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ-ತಮ್ಮ ಊರುಗಳಿಗೆ ತಲುಪಲು ಕಾಲ್ನಡಿಗೆ, ಸೈಕಲ್‌, ಟ್ರಕ್‌ ಹೀಗೆ ಸಾಕಷ್ಟು ಹಾದಿಯಲ್ಲಿ ತವರು ಸೇರಿಕೊಂಡಿದ್ದಾರೆ. 

ಇಂದು ಕೆಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ರೈಲು ವ್ಯವಸ್ಥೆ ಕಲ್ಪಿಸಿದೆ. ಆದರೂ ವಲಸೆ ಕಾರ್ಮಿಕರ ಕಷ್ಟ ಇನ್ನೂ ತೀರಿಲ್ಲ. ಇಂದು ಮಹಾರಾಷ್ಟ್ರದ ಮುಂಬೈ-ನಾಸಿಕ್‌ ಹೆದ್ದಾರಿಯಲ್ಲಿ ಟ್ರಕ್‌ವೊಂದು 40 ಉಷ್ಣಾಂಶ ತಾಪಮಾನದ ನಡುವೆಯೂ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹಲವರನ್ನು ತುಂಬಿ ಪ್ರಯಾಣ ನಡೆಸಿತ್ತು. ಈಗಾಗಲೇ 5 ಗಂಟೆ ಪ್ರಯಾಣ ಮಾಡಿದ್ದ ಟ್ರಕ್ 57 ವಲಸೆ ಕಾರ್ಮಿಕರೊಂದಿಗೆ ಸಂಪೂರ್ಣ ತುಂಬಿದೆ. ಹೇಗಾದರೂ ಮಾಡಿ ತಮ್ಮ ಊರಿಗೆ ತಲುಪಬೇಕೆಂಬುದು ವಲಸೆ ಕಾರ್ಮಿಕರ ಇಂಗಿತ.

ಮಂದಿ ವಲಸೆ ಕಾರ್ಮಿಕರನ್ನು ತುಂಬಿಸಿಕೊಂಡಿರುವ ಟ್ರಕ್‌, ಮುಂಬೈ ನಿಂದ ಥಾಣೆ ನಡುವೆ 5 ಗಂಟೆಗಳ ಕಾಲ ಪ್ರಯಾಣ ಮಾಡಿ ಇಂದು ಬೆಳಗ್ಗೆ 9 ಗಂಟೆಗೆ ನಿಲ್ಲಿಸಿತ್ತು. ಟ್ರಕ್‌ ತುಂಬಿದ್ದರೂ ಕೂಡ ಇನ್ನಷ್ಟು ಪ್ರಯಾಣಿಕರನ್ನು ತುಂಬಿಸುವುದು ಟ್ರೈವರ್‌ನ ಉದ್ದೇಶವಾಗಿತ್ತು. ಒಬ್ಬೊಬ್ಬರಿಂದ ತಲಾ 3,000 ರೂ. ಪಡೆಯಲಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com