ಲಾಕ್ ಡೌನ್ ನಂತರ ವಿಮಾನ ಪ್ರಯಾಣದ ವೇಳೆ ಪಾಲಿಸಲೇಬೇಕಾದ ನಿಯಗಳ ಬಗ್ಗೆ ಮಾಹಿತಿ ಇಲ್ಲಿದೆn
ಲಾಕ್ ಡೌನ್ ನಂತರ ವಿಮಾನ ಪ್ರಯಾಣದ ವೇಳೆ ಪಾಲಿಸಲೇಬೇಕಾದ ನಿಯಗಳ ಬಗ್ಗೆ ಮಾಹಿತಿ ಇಲ್ಲಿದೆn

ಲಾಕ್ ಡೌನ್ ನಂತರ ವಿಮಾನ ಪ್ರಯಾಣದ ವೇಳೆ ಪಾಲಿಸಲೇಬೇಕಾದ ನಿಯಗಳ ಬಗ್ಗೆ ಮಾಹಿತಿ ಇಲ್ಲಿದೆ

ಲಾಕ್ ಡೌನ್ ನಂತರದ ದಿನಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಬೇಕಿದ್ದು, ವಿಮಾನಯಾನ ಕ್ಷೇತ್ರ ಈಗಾಗಲೇ ತಯಾರಿ ನಡೆಸಿಕೊಳ್ಳುತ್ತಿದೆ. 

ನವದೆಹಲಿ: ಲಾಕ್ ಡೌನ್ ನಂತರದ ದಿನಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಬೇಕಿದ್ದು, ವಿಮಾನಯಾನ ಕ್ಷೇತ್ರ ಈಗಾಗಲೇ ತಯಾರಿ ನಡೆಸಿಕೊಳ್ಳುತ್ತಿದೆ. 

ವಿಮಾನಯಾನ ಪುನಾರಂಭಗೊಂಡ ನಂತರ ಪ್ರಯಾಣಿಕರು ಪಾಲಿಸಬೇಕಾದ ಅಂಶಗಳ ಕರಡು ಪ್ರತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಈಗಾಗಲೇ ಸಿದ್ಧಪಡಿಸಿದೆ. 

ಪಿಟಿಐ ನಲ್ಲಿ ಪ್ರಕಟಗೊಂಡಿರುವ ಈ ಕುರಿತ ಮಾಹಿತಿಯ ಪ್ರಕಾರ ಲಾಕ್ ಡೌನ್ ನಂತರ ವಿಮಾನದಲ್ಲಿ ಪ್ರಯಾಣಿಸುವ ಯಾವುದೇ ವ್ಯಕ್ತಿ ಕ್ಯಾಬಿನ್ ಬ್ಯಾಗೇಜ್ ನ್ನು ತೆಗೆದುಕೊಂಡು ಹೋಗುವಂತಿಲ್ಲ. ಅಂತೆಯೇ ಆರೋಗ್ಯ ಸೇತು ಆಪ್ ನ್ನು ಬಳಸಬೇಕಿದ್ದು, ವಿಮಾನ ಟೇಕ್ ಆಫ್ ಆಗುವುದಕ್ಕೂ ಎರಡು ಗಂಟೆಗಳಿಗೂ ಮುನ್ನ ವಿಮಾನ ನಿಲ್ದಾಣ ತಲುಪಬೇಕಾಗುತ್ತದೆ. 

ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಒಪಿ) ಯ ಪ್ರಕಾರ ಆರೋಗ್ಯ ಆಪ್ ನಲ್ಲಿರುವ ಗ್ರೀನ್ ಸ್ಟೇಟಸ್, ವೆಬ್ ಚೆಕ್-ಇನ್ ಗಳ ಬಗ್ಗೆಯೂ ಇದರಲ್ಲಿ ಪ್ರಸ್ತಾಪ ಮಾಡಲಾಗಿದೆ. 

ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೇ ಎಸ್ಒಪಿಯ ಕರಡುಪ್ರತಿಯಲ್ಲಿರುವ ಅಂಶಗಳನ್ನು ಭದ್ರತಾ ಸಿಬ್ಬಂದಿಗಳು, ಪೈಲಟ್ ಗಳು, ಸಹ ಇದನ್ನು ಪಾಲಿಸಲು ಸಲಹೆ ನೀಡಿದ್ದಾರೆ. 

ಗುರುತಿನ ಚೀಟಿ ಮೂಲಕ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನೂ ಕೈ ಬಿಡಲಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಮತ್ತೊಂದು ಸಲಹೆಯಲ್ಲಿ ವೈದ್ಯಕೀಯ ತುರ್ತು ಅಗತ್ಯವಿದ್ದಲ್ಲಿ ಆ ನಿರ್ದಿಷ್ಟ ರೋಗಿಗೆ ಸಹಕಾರಿಯಾಗುವಂತೆ  ವಿಮಾನದ 3 ಸಾಲುಗಳನ್ನೂ ಖಾಲಿಯಾಗಿಯೇ ಇಟ್ಟಿರಲು ಕ್ರಮ ಕೈಗೊಳ್ಳಲಾಗುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com