ಕೊವಿಡ್-19: ಒಂದು ವರ್ಷದ ವರೆಗೆ ಶೇ. 30ರಷ್ಟು ಸಂಬಳ ತ್ಯಜಿಸಿದ ರಾಷ್ಟ್ರಪತಿ

ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಒಂದು ವರ್ಷಗಳ ಕಾಲ ಶೇ. 30ರಷ್ಟು ತಮ್ಮ ಸಂಬಳ ತ್ಯಜಿಸಲು ನಿರ್ಧರಿಸಿದ್ದಾರೆ.
ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಒಂದು ವರ್ಷಗಳ ಕಾಲ ಶೇ. 30ರಷ್ಟು ತಮ್ಮ ಸಂಬಳ ತ್ಯಜಿಸಲು ನಿರ್ಧರಿಸಿದ್ದಾರೆ.

ರಾಷ್ಟ್ರಪತಿ ಭವನದ ಖರ್ಚು ವೆಚ್ಚಗಳಲ್ಲೂ ಕಡಿಮೆ ಮಾಡಲು ನಿರ್ಧರಿಸಿರುವ ರಾಷ್ಟ್ರಪತಿಗಳು, ತಮ್ಮ ದೇಶಿ ಪ್ರವಾಸ ಮತ್ತು ಕಾರ್ಯಕ್ರಮಗಳನ್ನು ಕಡಿಮೆ ಮಾಡಿದ್ದಾರೆ. ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಕಳೆದ ಮಾರ್ಚ್ ತಿಂಗಳಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಪಿಎಂ ಕೇರ್ಸ್ ನಿಧಿಗೆ ಒಂದು ತಿಂಗಳ ಸಂಬಳವನ್ನು ನೀಡಿ ಇತರರಿಗೆ ಮಾದರಿಯಾಗಿದ್ದರು.

ಈಗ ಮುಂದಿನ ಒಂದು ವರ್ಷದ ಅವಧಿಯ ವರೆಗೂ ಶೇಕಡಾ 30ರಷ್ಟು ಸಂಬಳವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಕೊರೆೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

ಇದಲ್ಲದೆ, ವಿಧ್ಯುಕ್ತ ಸಮಾರಂಭಗಳಲ್ಲಿ ಬಳಸಬೇಕಾಗಿದ್ದ ಅಧ್ಯಕ್ಷೀಯ ಲಿಮೋಸಿನ್ ಕಾರಿನ ಖರೀದಿಯನ್ನು ಮುಂದೂಡಲು ನಿರ್ಧರಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ ರಾಷ್ಟ್ರಪತಿ ಭವನ ಹಾಗೂ ಸರ್ಕಾರದ ಅಸ್ಥಿತ್ವದಲ್ಲಿರುವ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗುವುದು ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com