ಖುಷ್ಬೂ ಓರ್ವ ಜೋಕರ್: ನಟಿ ವಿರುದ್ದ ಗಾಯತ್ರಿ ರಘುರಾಮ್ ಅಸಂಬದ್ಧ ಹೇಳಿಕೆ

ದಕ್ಷಿಣ ಭಾರತದ ಪ್ರಮುಖ ನಟಿ ಖುಷ್ಬೂ ಓರ್ವ ಬ್ರೋಕರ್ ಎಂದು ಮತ್ತೊಬ್ಬ ನಟಿ ಹಾಗೂ ನೃತ್ಯ ನಿರ್ದೇಶಕಿ ಗಾಯತ್ರಿ ರಘುರಾಮ್ ಹೇಳಿಕೆ ನೀಡಿದ್ದಾರೆ.
ಖುಷ್ಬೂ
ಖುಷ್ಬೂ

ಚೆನ್ನೈ: ದಕ್ಷಿಣ ಭಾರತದ ಪ್ರಮುಖ ನಟಿ ಖುಷ್ಬೂ ಓರ್ವ ಜೋಕರ್ ಎಂದು ಮತ್ತೊಬ್ಬ ನಟಿ ಹಾಗೂ ನೃತ್ಯ ನಿರ್ದೇಶಕಿ ಗಾಯತ್ರಿ ರಘುರಾಮ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಚಾರಕಿಯಾಗಿರುವ ಖುಷ್ಬೂ ಇತ್ತೀಚಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಟೀಕಿಸಿದ್ದರು. ಈ ಕುರಿತು ತಮ್ಮ ಟ್ವೀಟರ್ ನಲ್ಲಿ ಪ್ರಧಾನಿ ಮಂತ್ರಿ ವಿರುದ್ದ ಖುಷ್ಬೂ ಹಲವು ಆರೋಪಗಳನ್ನು ಮಾಡಿದ್ದರು. 

ಪ್ರಧಾನಮಂತ್ರಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಭಾರತದ ಪ್ರಾಚೀನ ಭಾಷೆಯಾಗಿರುವ ತಮಿಳಿನಲ್ಲಿ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದರು. ಖುಷ್ಬೂ ಅವರ ಟೀಕೆಗಳಿಗೆ ನಟಿ, ಬಿಜೆಪಿ ಸದಸ್ಯೆ ಗಾಯತ್ರಿ ರಘುರಾಮ್ ತಿರುಗೇಟು ನೀಡಿದ್ದಾರೆ. ಆಕೆ ತಮ್ಮ ಟ್ವೀಟರ್ ನಲ್ಲಿ ಖುಷ್ಬೂ ಓರ್ವ ಜೋಕರ್ ಎಂದು ದೂರಿದ್ದಾರೆ. ಖುಷ್ಬೂ ಹೇಳಿಕೆಯನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡಾ ತೀವ್ರ ಖಂಡನೆಗೊಳಗಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com