ಸರ್ಕಾರಕ್ಕೆ  ರೈತರೆಡೆಗೆ ಸಂವೇದನೆ ಇಲ್ಲ: ಕಾಂಗ್ರೆಸ್

ಕೇಂದ್ರ ಸರ್ಕಾರಕ್ಕೆ ರೈತರೆಡೆಗೆ ಸಂವೇದನೆ ಇಲ್ಲ ಎಂದು ಕಾಂಗ್ರೆಸ್ ಆರೋಪಿಸಿದ್ದು ರೈತರನ್ನು ಕೋವಿಡ್-19 ಆರ್ಥಿಕ ಪ್ಯಾಕೇಜ್ ನಲ್ಲಿ ನಿರ್ಲಕ್ಷಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ. 
ಕಾಂಗ್ರೆಸ್
ಕಾಂಗ್ರೆಸ್

ನವದೆಹಲಿ: ಕೇಂದ್ರ ಸರ್ಕಾರಕ್ಕೆ ರೈತರೆಡೆಗೆ ಸಂವೇದನೆ ಇಲ್ಲ ಎಂದು ಕಾಂಗ್ರೆಸ್ ಆರೋಪಿಸಿದ್ದು ರೈತರನ್ನು ಕೋವಿಡ್-19 ಆರ್ಥಿಕ ಪ್ಯಾಕೇಜ್ ನಲ್ಲಿ ನಿರ್ಲಕ್ಷಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದೆ. 

ಕಾಂಗ್ರೆಸ್ ನ ಪ್ರಧಾನ ವಕ್ತಾರ ರಣ್ ದೀಪ್ ಸುರ್ಜೆವಾಲ, 20 ಲಕ್ಷ ಕೋಟಿ ಪ್ಯಾಕೇಜ್ ನ್ನು 'ಜುಮ್ಲಾ ಪ್ಯಾಕೇಜ್' ಎಂದು ಕುಹುಕವಾಡಿದ್ದಾರೆ. ರೈತರ ಖಾತೆಗೆ ಒಂದೇ ಒಂದು ರೂಪಾಯಿಯನ್ನೂ ಮೋದಿ ಸರ್ಕಾರ ಹಾಕಿಲ್ಲ.  ಈ ರಬಿ ಋತುವಿನಲ್ಲಿ ರೈತರಿಗೆ 50,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸುರ್ಜೆವಾಲ ಆರೋಪಿಸಿದ್ದಾರೆ. 

ಮಾರುಕಟ್ಟೆಗಳು ಸ್ತಬ್ಧವಾಗಿರುವುದರಿಂದ ಅತ್ಯಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿ ಬಂದಿದೆ. ಸರ್ಕಾರ ರಬಿ ಬೆಳೆಗಳನ್ನು ಶೇ.26.5 ರಷ್ಟು ಬೆಲೆಗೆ ಮಾತ್ರ ಖರೀದಿಸುತ್ತಿದೆ. ಇದು ಪ್ಯಾಕೇಜ್ ಜುಲ್ಮಾ  ಪ್ಯಾಕೇಜ್ ಎಂಬುದು ಈ ಮೂಲಕ ಸಾಬೀತಾಗಿದೆ, ಇದರಿಂದ ರೈತರಿಗೂ ಉಪಯೋಗವಿಲ್ಲ ಕೃಷಿ ಕಾರ್ಮಿಕರಿಗೂ ಉಪಯೋಗವಿಲ್ಲ ಎಂದು ಸುರ್ಜೆವಾಲ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com