ಕೂಡಿ ಬಾಳಲು ಪತ್ನಿ ವಿರೋಧ; ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆಗೆ ಯತ್ನ!

ತನ್ನೊಂದಿಗೆ ಕೂಡಿ ಬಾಳಲು ಪತ್ನಿ ನಿರಾಕರಿಸುತ್ತಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

Published: 15th May 2020 07:56 PM  |   Last Updated: 15th May 2020 07:56 PM   |  A+A-


Bike rider set on fire, killed in Bengaluru

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : PTI

ಹೈದರಾಬಾದ್: ತನ್ನೊಂದಿಗೆ ಕೂಡಿ ಬಾಳಲು ಪತ್ನಿ ನಿರಾಕರಿಸುತ್ತಿದ್ದಾಳೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಭುವನ್ ರೆಡ್ಡಿ ಎಂಬ 35 ವರ್ಷದ ವ್ಯಕ್ತಿ ತನ್ನ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ್ದು, ಪ್ರಸ್ತುತ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಪೊಲೀಸ್ ಮೂಲಗಳ ಪ್ರಕಾರ 20 ದಿನಗಳ ಹಿಂದೆ ಭುವನ್ ರೆಡ್ಡಿ ಮತ್ತು ಆತನ ಪತ್ನಿ ನಡುವೆ ಜಗಳವಾಗಿತ್ತು. ಬಳಿಕ ಆತನ ಪತ್ನಿ ಆತನನ್ನು ತೊರೆದು ತನ್ನ ಸಹೋದರಿಯ ಮನೆಗೆ ಹೋಗಿದ್ದಳು. ಭುವನ್ ರೆಡ್ಡಿ ಕೂಡ ಕೆಲ ದಿನಗಳ ಬಳಿಕ ಅ ಮನೆಗೆ ಹೋಗಿ ಮನೆಗೆ ಬರುವಂತೆ ಜಗಳ  ಮಾಡಿದ್ದ. ಅಲ್ಲದೆ ಜಗಳ ತಾರಕಕ್ಕೇರಿ ವಾಕ್ಸಮರ ಕೈಕೈ ಮಿಲಾಯಿಸುವಂತೆ ಆಗಿತ್ತು. ಇದರಿಂದ ನೊಂದಿದ್ದ ಭುವನ್ ರೆಡ್ಡಿ ಪತ್ನಿ ಆತನ ವಿರುದ್ಧ ಪೊಲೀಸ್ ದೂರು ನೀಡಿದ್ದಳು. ಬಳಿಕವೂ ತನ್ನ ಪ್ರಯತ್ನ ಮುಂದುವರೆಸಿದ್ದ ಭುವನ್ ರೆಡ್ಡಿ ಮನೆಗೆ ಬರುವಂತೆ ಪತ್ನಿಗೆ ಕೇಳಿದ್ದ. ಆದರೆ ಆಕೆ  ಅದಕ್ಕೂ ನಿರಾಕರಿಸಿದಾಗ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp