ಯೋಧನಲ್ಲಿ ಕೊರೋನಾ ಸೋಂಕು: ಭಾರತೀಯ ಸೇನೆ ಕೇಂದ್ರ ಕಚೇರಿ ಭಾಗಶಃ ಬಂದ್

ರಾಜಧಾನಿ ದೆಹಲಿಯಲ್ಲಿರುವ ಭಾರತೀಯ ಸೇನೆ ಕೇಂದ್ರ ಕಚೇರಿಯಲ್ಲಿ ಸೈನಿಕರೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನಾ ಭವನದ ಒಂದು ಭಾಗವನ್ನು ಮುಚ್ಚಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜಧಾನಿ ದೆಹಲಿಯಲ್ಲಿರುವ ಭಾರತೀಯ ಸೇನೆ ಕೇಂದ್ರ ಕಚೇರಿಯಲ್ಲಿ ಸೈನಿಕರೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನಾ ಭವನದ ಒಂದು ಭಾಗವನ್ನು ಮುಚ್ಚಲಾಗಿದೆ.

ಸೇನಾ ಭವನದ ಸೋಂಕು ತಗುಲಿರುವ ಭಾಗವನ್ನು ಮುಚ್ಚಿ ಸೋಂಕು ನಿವಾರಣೆಯಿಂದ ಸ್ವಚ್ಛಗೊಳಿಸಲಾಗುತ್ತಿದೆ. ಶಿಷ್ಠಾಚಾರದ ಪ್ರಕಾರ ಸೋಂಕಿತ ಸೈನಿಕ ಸಂಪರ್ಕ ಹೊಂದಿದ್ದವರ ಪತ್ತೆಹಚ್ಚಲಾಗುತ್ತಿದ್ದು ಅವರನ್ನು ಕ್ವಾರಂಟೈನ್ ಗೊಳಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ಈ ಹಿಂದೆ ಮೇ 4ರಂದು ಭಾರತೀಯ ಸೇನಾ ಆಸ್ಪತ್ರೆಯಲ್ಲಿ ಸೇವಾ ನಿರತ ಮತ್ತು ನಿವೃತ್ತ ಸಿಬ್ಬಂದಿಗಳು ಸೇರಿ 24 ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಲಾಗಿತ್ತು. ದೆಹಲಿಯ ಭಾರತೀಯ ಸೇನೆಯ ಸಂಶೋಧನೆ ಮತ್ತು ರೆಫ್ಫರಲ್ ಹಾಸ್ಪಿಟಲ್ ನ್ನು ಸ್ವಚ್ಛಗೊಳಿಸಲಾಗಿತ್ತು. ಸೋಂಕು ರೋಗಿಗಳನ್ನು ದೆಹಲಿಯ ಕಂಟೋನ್ ಮೆಂಟ್ ಪ್ರದೇಶದ ಬೇಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

ಇದಲ್ಲದೆ ಸೇವಾ ನಿರತ, ನಿವೃತ್ತ ಅಧಿಕಾರಿಗಳು, ಅವರ ಅವಲಂಬಿತರು ಸೇರಿದಂತೆ 74 ಮಂದಿ ಕೋವಿಡ್-19 ಚಿಕಿತ್ಸೆಗೆ ದಾಖಲಾಗಿದ್ದಾರೆ. 42 ಮಂದಿ ಸೇನಾ ಸಿಬ್ಬಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 74 ಮಂದಿ ರೋಗಿಗಳಲ್ಲಿ 60 ಸೇವಾ ನಿರತ ಸಿಬ್ಬಂದಿಯಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಮೊದಲ ಸಲ ಸೋಂಕು ಕಾಣಿಸಿಕೊಂಡಿದ್ದ ಸಿಬ್ಬಂದಿ ಗುಣಮುಖರಾಗಿ ಸೇವೆಗೆ ಮರಳಿದ್ದಾರೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರಾವಣೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com