ಅಲ್ಪ ಸೇವಾ ಆಯೋಗವನ್ನು ಹೆಚ್ಚು ಆಕರ್ಷಕವಾಗಿ ಮಾಡುವತ್ತ ಸೇನೆಯ ಚಿತ್ತ: ಜನರಲ್ ಬಿಪಿನ್ ರಾವತ್

ಭಾರತ ಸೇನೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಅಧಿಕಾರಿ ಮತ್ತು ಅಧಿಕಾರಿ ಹುದ್ದೆಗಿಂತ ಕೆಳಗಿರುವ ಸಿಬ್ಬಂದಿ(ಪಿಬಿಒಆರ್) ಹಂತದಲ್ಲಿ ಇರುವ ಕೊರತೆಯನ್ನು ನಿವಾರಿಸುವತ್ತ ಗಮನ ಹರಿಸಿದೆ. ಅಲ್ಲದೆ ರಕ್ಷಣಾ ಬಜೆಟ್ ನ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ.

Published: 15th May 2020 12:29 PM  |   Last Updated: 15th May 2020 12:54 PM   |  A+A-


General Bipin Rawat

ಜ.ಬಿಪಿನ್ ರಾವತ್

Posted By : Sumana Upadhyaya
Source : The New Indian Express

ನವದೆಹಲಿ: ಭಾರತ ಸೇನೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಅಧಿಕಾರಿ ಮತ್ತು ಅಧಿಕಾರಿ ಹುದ್ದೆಗಿಂತ ಕೆಳಗಿರುವ ಸಿಬ್ಬಂದಿ(ಪಿಬಿಒಆರ್) ಹಂತದಲ್ಲಿ ಇರುವ ಕೊರತೆಯನ್ನು ನಿವಾರಿಸುವತ್ತ ಗಮನ ಹರಿಸಿದೆ. ಅಲ್ಲದೆ ರಕ್ಷಣಾ ಬಜೆಟ್ ನ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ.

ಭಾರತೀಯ ಸೇನೆಯಲ್ಲಿ ಟೂರ್ ಆಫ್ ಡ್ಯೂಟಿ ಪ್ರಾಯೋಗಿಕ ಮಾದರಿಯಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದ್ದು ಹಳೆಯ ಅಲ್ಪ ಸೇವೆಯ ಆಯೋಗ(ಎಸ್ ಎಸ್ ಸಿ) ಯೋಜನೆಯನ್ನು ಇನ್ನಷ್ಟು ಆಕರ್ಷಕವಾಗಿ ರೂಪಿಸಲು ಮುಂದಾಗಿದೆ.

ಈ ಬಗ್ಗೆ ನಿನ್ನೆ ಮಾಹಿತಿ ನೀಡಿದ ಭಾರತ ರಕ್ಷಣಾ ಸಿಬ್ಬಂದಿ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅಲ್ಪ ಸೇವಾ ಆಯೋಗವನ್ನು ಇನ್ನಷ್ಟು ಆಕರ್ಷಕಗೊಳಿಸುವತ್ತ ನಾವು ಗಮನ ಹರಿಸುತ್ತಿದ್ದೇವೆ ಎಂದರು.

ಮುಂಬರುವ ಸಮಯದಲ್ಲಿ, ಎಸ್‌ಎಸ್‌ಸಿ ಸೈನ್ಯವನ್ನು ತೊರೆಯುವ ಅಧಿಕಾರಿಗಳನ್ನು ಇತರ ಸಿವಿಲ್ ಉದ್ಯೋಗಗಳಿಗೆ ವೃತ್ತಿಪರವಾಗಿ ಶಸ್ತ್ರಸಜ್ಜಿತವಾಗಿಸಲು ಮಾರ್ಗೋಪಾಯಗಳ ಜೊತೆಗೆ ಆರ್ಥಿಕವಾಗಿ ಸದೃಢಗೊಳಿಸಲು ಕೂಡ ನೋಡಬಹುದು ಎಂದು ಜನರಲ್ ರಾವತ್ ಹೇಳಿದ್ದಾರೆ.

ಟೂರ್ ಆಫ್ ಡ್ಯೂಟಿ ಬಗ್ಗೆ ಮಾತನಾಡಿದ ಅವರು, ಇದು ಮಾತುಕತೆ ಹಂತದಲ್ಲಿದ್ದು ಭವಿಷ್ಯದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಯುವಕರಿಗೆ ನೀಡುವ ತರಬೇತಿ ಮತ್ತು ಸಜ್ಜುಗೊಳಿಸುವಿಕೆಯ ವೆಚ್ಚದ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಟೂರ್ ಆಫ್ ಡ್ಯೂಟಿ ಪ್ರಸ್ತುತ ಸೇನೆಗೆ ಮಾತ್ರ ಸೀಮಿತವಾಗಿದ್ದು ಭಾರತದ ಸದೃಢ ಯುವ ಕಾರ್ಯಕರ್ತರನ್ನು ಸೇನೆಗೆ ಸೇರುವಂತೆ ಆಕರ್ಷಿಸಲು, ಯುದ್ಧ ವಿಭಾಗಕ್ಕೆ ಯುವಜನತೆಯನ್ನು ಸೆಳೆಯಲು ಇದನ್ನು ತರಲಾಗುತ್ತಿದೆ.  ಮೂರು ವರ್ಷಗಳ ಅವಧಿಗೆ ಅಧಿಕಾರಿ ಮತ್ತು ಜವಾನ ಎರಡೂ ಹುದ್ದೆಗಳಲ್ಲಿ ಯುವಜನತೆಯನ್ನು ನೇಮಕಾತಿ ಮಾಡಿಕೊಳ್ಳುವುದು ಟೂರ್ ಆಫ್ ಡ್ಯೂಟಿ ಎಂದಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp