ವಿಚಾರ ಗ್ರಹಿಕೆಯಲ್ಲಿನ ವ್ಯತ್ಯಾಸದಿಂದ ಭಾರತ-ಚೀನಾ ಸೇನಾಪಡೆಗಳ ನಡುವೆ ಜಟಾಪಟಿ ಆಗಿತ್ತು: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ವಾಸ್ತವ ಗಡಿ ರೇಖೆ ವಿಚಾರ ಸಂಬಂಧ ಭಾರತ ಹಾಗೂ ಚೀನಾ ಸೇನಾಪಡೆಗಳ ನಡುವೆ ಗ್ರಹಿಕೆಯಲ್ಲಿ ವ್ಯತ್ಯಾಸಗಳು ಕಂಡು ಬಂದ ಕಾರಣ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಸ್ಪಷ್ಟನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಾಸ್ತವ ಗಡಿ ರೇಖೆ ವಿಚಾರ ಸಂಬಂಧ ಭಾರತ ಹಾಗೂ ಚೀನಾ ಸೇನಾಪಡೆಗಳ ನಡುವೆ ಗ್ರಹಿಕೆಯಲ್ಲಿ ವ್ಯತ್ಯಾಸಗಳು ಕಂಡು ಬಂದ ಕಾರಣ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಸ್ಪಷ್ಟನೆ ನೀಡಿದೆ. 

ಭಾರತ-ಚೀನಾ ಗಡಿಯಲ್ಲಿ ಕಳೆದ ವಾರ ಉಭಯ ದೇಶಗಳ ಸೈನಿಕರ ನಡುವೆ ಹೊಡೆದಾಟ ಸಂಭವಿಸಿತ್ತು.  ನೂರಾರು ಸೈನಿಕರ ನಡುವೆ ಲಡಾಖ್'ಡನ ಪ್ಯಾಂಗ್ಯಾಂಗ್ ಸರೋವರ ಹಾಗೂ ಸಿಕ್ಕಿಂ ಗಡಿ ಪ್ರದೇಶದಲ್ಲಿ ಘರ್ಷಣೆ ಏರ್ಪಟ್ಟು, ಕೆಲವರಿಗೆ ಗಾಯಗಳಾಗಿದ್ದವು. 

ಘಟನೆ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ಅವರು, ವಾಸ್ತವ ಗಡಿ ರೇಖೆ ವಿಚಾರ ಸಂಬಂಧ ಉಭಯ ಸೇನೆಗಳ ನಡುವೆ ವಿಚಾರ ಗ್ರಹಿಕೆಯಲ್ಲಿ ವ್ಯತ್ಯಾಸಗಳು ಕಂಡು ಬಂದ ಹಿನ್ನಲೆಯಲ್ಲಿ ಘರ್ಷಣೆ ಏರ್ಪಟ್ಟಿತ್ತು ಎಂದು ಹೇಳಿದ್ದಾರೆ. 

ಎಲ್ಎಸಿ ಬಗ್ಗೆ ಸಾಮಾನ್ಯ ಗ್ರಹಿಕೆಗಳಿದಿದ್ದರೆ ಇಂತಹ ಸಂಘರ್ಷಗಳು ಸಂಭವಿಸುತ್ತಿರಲಿಲ್ಲ. ಇದೀಗ ಇಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವ ಸಲುವಾಗಿ ಯಾಂತ್ರಿಕ ವ್ಯವಸ್ಥೆಗಳನ್ನು ಸ್ಥಾಪಿಸಲಾಗುತ್ತದೆ. ಉಭಯ ರಾಷ್ಟ್ರಗಳೂ ಎಲ್ಲಾ ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೊಳಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತವೆ. 2018ರಲ್ಲು ವುಹಾನ್ ಹಾಗೂ 2019ರಲ್ಲಿ ಚೆನ್ನನಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷರಿಬ್ಬರು ಅನೌಪಚಾರಿಕ ಶೃಂಗಸಭೆಯನ್ನು ನಡೆಸಿದ್ದು, ಈ ವೇಳೆ ಗಡಿಯಲ್ಲಿ ಶಾಂತಿ ಸ್ಥಾಪನೆಗೊಳಿಸಲು ಪುನರುಚ್ಛರಿಸಿದ್ದಾರೆಂದು ತಿಳಿಸಿದ್ದಾರೆ. 

ಉಭಯ ಸೇನೆಗಳ ನಡುವಿನ ಘರ್ಷಣೆ ಸ್ಥಳೀಯ ಅಥವಾ ಜಾಗತಿಕ ಚಟುವಟಿಕೆಗಳಿಗೆ ಸಂಬಂಧವನ್ನು ಹೊಂದಿಲ್ಲ. ಉಭಯ ಸೇನೆಗಳ ನಡುವೆ ತೀವ್ರ ತಿಕ್ಕಾಟ ಎದುರಾದ ಹಿನ್ನೆಲೆಯಲ್ಲಿ ಕೆಲ ಯೋಧರಿಗೆ ಗಾಯಗಳಾಗಿವೆ. ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿಯೇ ಮಾತುಕತೆಗಳನ್ನು ನಡೆಸಲಾಗಿದೆ. "ಇಂತಹ ಘಟನೆಗಳನ್ನು ಸ್ಥಾಪಿತ ಕಾರ್ಯವಿಧಾನಗಳಿಂದ ನಿರ್ವಹಿಸಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಎಂಎಂ ನರವಾಣೆಯವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com