ನೈರುತ್ಯ ಮುಂಗಾರು ಜೂನ್ 5ಕ್ಕೆ ಕೇರಳ ಪ್ರವೇಶ ಸಾಧ್ಯತೆ

ಈ ವರ್ಷ ನೈರುತ್ಯ ಮುಂಗಾರು ಮಳೆ ಆಗಮನ ಕೊಂಚ ತಡವಾಗಲಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ನಂತರ ರಾಜ್ಯಕ್ಕೆ ಆಗಮಿಸುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರ: ಈ ವರ್ಷ ನೈರುತ್ಯ ಮುಂಗಾರು ಮಳೆ ಆಗಮನ ಕೊಂಚ ತಡವಾಗಲಿದೆ. ಸಾಮಾನ್ಯವಾಗಿ ಜೂನ್ 1ಕ್ಕೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ನಂತರ ರಾಜ್ಯಕ್ಕೆ ಆಗಮಿಸುತ್ತದೆ.

ಆದರೆ ಈ ವರ್ಷ ಕೇರಳಕ್ಕೆ ಜೂನ್ 5ಕ್ಕೆ ಮುಂಗಾರು ಪ್ರವೇಶವಾಗಲಿದೆ. ಅಂದರೆ ನಮ್ಮ ರಾಜ್ಯಕ್ಕೆ ಜೂನ್ 5ರ ನಂತರ 9ರ ಮಧ್ಯೆ ಯಾವ ದಿನವಾದರೂ ಪ್ರವೇಶವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಆರಂಭದಲ್ಲಿ ಮುಂಗಾರು ಮಳೆ ದಕ್ಷಿಣ ಅಂಡಮಾನ್ ಸಮುದ್ರದತ್ತ ಬೀಸಿ ನಂತರ ಉತ್ತರಾಭಿಮುಖವಾಗಿ ಪಶ್ಚಿಮ ಭಾಗಕ್ಕೆ ಬಂಗಾಳ ಕೊಲ್ಲಿ ಮೂಲಕ ವಿಸ್ತಾರಗೊಳ್ಳಲಿದೆ. ಅಂಡಮಾನ್ ಸಮುದ್ರ ತೀರದಲ್ಲಿ ಸಾಮಾನ್ಯವಾಗಿ ಮೇ 22ರ ಹೊತ್ತಿಗೆ ನೈರುತ್ಯ ಮುಂಗಾರು ಪ್ರವೇಶವಾಗುತ್ತದೆ. ಪ್ರಸ್ತುತ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನೆರೆಹೊರೆ ಪ್ರದೇಶಗಳಲ್ಲಿ ಕಡಿಮೆ ಒತ್ತಡವಿದೆ.

ದಕ್ಷಿಣ ಬಂಗಾಳ ಕೊಲ್ಲಿಯ ಕೇಂದ್ರ ಭಾಗದಲ್ಲಿ ನಾಳೆ ಚಂಡಮಾರುತ ಏಳುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಅಂಡಮಾನ್ ಗೆ ತಲುಪಿದ 10 ದಿನಗಳ ನಂತರ ಕೇರಳಕ್ಕೆ ಮುಂಗಾರು ಮಳೆ ಪ್ರವೇಶವಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ, ನೈರುತ್ಯ ಮುಂಗಾರು ಈ ತಿಂಗಳ 28ರಂದು ಕೇರಳಕ್ಕೆ ಪ್ರವೇಶವಾಗಲಿದೆ. ಮತ್ತೊಂದು ಹವಾಮಾನ ಸಂಸ್ಥೆ ವೆದರ್ ಚಾನೆಲ್ ಪ್ರಕಾರ ಮೇ 31ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com