ಮಸೀದಿ ಲೌಡ್ ಸ್ಪೀಕರ್ ಗಳಲ್ಲಿ ಆಜಾನ್ ಕೂಗಿಗೆ ಅಲ್ಲಹಾಬಾದ್ ಹೈಕೋರ್ಟ್ ಬ್ರೇಕ್!

ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಗಳ ಮೂಲಕ ಆಜಾನ್ ಕೂಗುವುದಕ್ಕೆ ಉತ್ತರ ಪ್ರದೇಶದ ಅಲ್ಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್

ಪ್ರಯಾಗ್: ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಗಳ ಮೂಲಕ ಆಜಾನ್ ಕೂಗುವುದಕ್ಕೆ ಉತ್ತರ ಪ್ರದೇಶದ ಅಲ್ಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಗಾಜಿಪುರ್, ಹಥ್ರಾಸ್, ಫರೂಖಾಬಾದ್ ನಲ್ಲಿನ ಮಸೀದಿಗಳಲ್ಲಿ ಆಜಾನ್ ಗೆ ನಿರ್ಬಂಧವಿಧಿಸುವುದರ ಕುರಿತು ನಡೆಸಿದ ಅರ್ಜಿ ವಿಚಾರಣೆಯಲ್ಲಿ ಈ ಮಹತ್ವದ ತೀರ್ಪು ಹೊರಬಿದ್ದಿದೆ. ಮೂರು ಜಿಲ್ಲಾ ನ್ಯಾಯಾಲಯಗಳು ನೀಡಿದ ಆದೇಶವನ್ನು ಹಿಂತೆಗೆದುಕೊಂಡಿರುವ ಅಲ್ಲಹಾಬಾದ್ ಹೈಕೋರ್ಟ್ ಮಸೀದಿಗಳಲ್ಲಿ ಮಸೀದಿ ಲೌಡ್ ಸ್ಪೀಕರ್ ಗಳಲ್ಲಿ ಆಜಾನ್ ಕೂಗಕೂಡದು, ವ್ಯಕ್ತಿಗಳು ತಮ್ಮಷ್ಟಕ್ಕೆ ತಾವು ಮಾತ್ರ ಆಜಾನ್ ಕೂಗಬಹುದೆಂದು ತೀರ್ಪು ಪ್ರಕಟಿಸಿದೆ. 

ಆಜಾನ್ ಇಸ್ಲಾಮಿನ ಅವಿಭಾಜ್ಯ ಅಂಗವಾಗಿದೆ. ಆದರೆ ಧ್ವನಿವರ್ಧಕಗಳ ಮೂಲಕ ಆಜಾನ್ ಕೂಗುವುದು ಧರ್ಮದ ಅವಿಭಾಜ್ಯ ಅಂಗ ಎಂದು ಹೇಳಲು ಸಾಧ್ಯವಿಲ್ಲವೆಂದು ನ್ಯಾ. ಶಶಿಕಾಂತ್, ಅಜಿತ್ ಕುಮಾರ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com