ಮಧ್ಯ ಪ್ರದೇಶದಲ್ಲಿ ಮಗುಚಿ ಬಿದ್ದ ಟ್ರಕ್: 5 ಮಂದಿ ವಲಸೆ ಕಾರ್ಮಿಕರು ಸಾವು; 17 ಮಂದಿಗೆ ಗಾಯ

ಉತ್ತರ ಪ್ರದೇಶದ ಔರೈಯಾದಲ್ಲಿ ಶನಿವಾರ ನಸುಕಿನ ಜಾವ ಟ್ರಕ್ ಅಪಘಾತದಲ್ಲಿ 24 ಮಂದಿ ವಲಸೆ ಕಾರ್ಮಿಕರು ಮೃತಪಟ್ಟ ಘಟನೆಯ ಮಾದರಿಯಲ್ಲಿಯೇ ಮಧ್ಯ ಪ್ರದೇಶದ ಸಾಗರ್ ಮತ್ತು ಛತಾಪುರ್ ಗಡಿಯಲ್ಲಿ ವಲಸೆ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಮಗುಚಿ ಬಿದ್ದು ಐವರು ಮೃತಪಟ್ಟಿದ್ದಾರೆ, 17 ಮಂದಿಗೆ ಗಾಯವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಛತ್ತಾಪುರ್ (ಮಧ್ಯ ಪ್ರದೇಶ): ಉತ್ತರ ಪ್ರದೇಶದ ಔರೈಯಾದಲ್ಲಿ ಶನಿವಾರ ನಸುಕಿನ ಜಾವ ಟ್ರಕ್ ಅಪಘಾತದಲ್ಲಿ 24 ಮಂದಿ ವಲಸೆ ಕಾರ್ಮಿಕರು ಮೃತಪಟ್ಟ ಘಟನೆಯ ಮಾದರಿಯಲ್ಲಿಯೇ ಮಧ್ಯ ಪ್ರದೇಶದ ಸಾಗರ್ ಮತ್ತು ಛತಾಪುರ್ ಗಡಿಯಲ್ಲಿ ವಲಸೆ ಕಾರ್ಮಿಕರನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಮಗುಚಿ ಬಿದ್ದು ಐವರು ಮೃತಪಟ್ಟಿದ್ದಾರೆ, 17 ಮಂದಿಗೆ ಗಾಯವಾಗಿದೆ.

ಈ ವಲಸೆ ಕಾರ್ಮಿಕರು ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಕಡೆಗೆ ಸಾಗುತ್ತಿದ್ದರು. ಗಾಯಗೊಂಡವರನ್ನು ಬಾಂದಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಪ್ರತಿದಿನ ಮಹಾರಾಷ್ಟ್ರ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಮಧ್ಯ ಪ್ರದೇಶ ಮೂಲಕವಾಗಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದಾರೆ. ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳುತ್ತಿದ್ದರೂ ಕೂಡ ವಲಸೆ ಕಾರ್ಮಿಕರು ಗೂಡ್ಸ್ ಮಾದರಿಯ ಟ್ರಕ್ ಗಳು, ಆಟೋ ರಿಕ್ಷಾ, ಸೈಕಲ್, ಕಾಲ್ನಡಿಗೆ ಮೂಲಕ ಸಾಗುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com