ಉತ್ತರ ಪ್ರದೇಶ: ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆಗಳು- ಅಖಿಲೇಶ್ ಯಾದವ್

ಉತ್ತರ ಪ್ರದೇಶದ  ಔರೈಯಾದಲ್ಲಿ ನಡೆದ ಸಂಭವಿಸಿದ ಭೀಕರ ಅಪಘಾತದಲ್ಲಿ 24 ವಲಸೆ ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ತೀವ್ರ ದು:ಖ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆ ಎಂದಿದ್ದಾರೆ.

Published: 16th May 2020 11:53 AM  |   Last Updated: 16th May 2020 02:21 PM   |  A+A-


UP_Accident_Akhilesh_yadhav1

ಅಪಘಾತ, ಅಖಿಲೇಶ್ ಯಾದವ್ ಚಿತ್ರ

Posted By : Nagaraja AB
Source : PTI

ಲಖನೌ: ಉತ್ತರ ಪ್ರದೇಶದ  ಔರೈಯಾದಲ್ಲಿ ನಡೆದ ಸಂಭವಿಸಿದ ಭೀಕರ ಅಪಘಾತದಲ್ಲಿ 24 ವಲಸೆ ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ತೀವ್ರ ದು:ಖ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆ ಎಂದಿದ್ದಾರೆ.

ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 24 ಮಂದಿ ಮೃತಪಟ್ಟಿದ್ದು, 36 ಜನರು ಗಂಬೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಲಸಿಗರ ಕಾರ್ಮಿಕರ ಸಾವಿನ ಬಗ್ಗೆ ತೀವ್ರ  ನೋವಾಗುತ್ತಿದೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಲಲಿ. ಎಲ್ಲ ಗೊತ್ತಿದ್ದರೂ  ಹೃದಯ ಹೀನ ಜನರು ಹಾಗೂ ಅವರ ಬೆಂಬಲಿಗರು ನಿರ್ಲಕ್ಷ್ಯದ ಬಗ್ಗೆ ಮೌನ ವಹಿಸಿದ್ದಾರೆ. ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆಗಳು ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp