ಬರ್ತ್ ಡೇ ಪಾರ್ಟಿ ತಂದ ಕುತ್ತು; ಹೈದರಾಬಾದ್ ನ ಒಂದೇ ಅಪಾರ್ಟ್ ಮೆಂಟ್ ನ 25 ಮಂದಿಗೆ ಕೊರೋನಾ ಸೋಂಕು!

ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಮಾಡುವ ಎಡವಟ್ಟುಗಳಿಗೆ ಈ ಒಂದು ಘಟನೆ ಸ್ಪಷ್ಟ ನಿದರ್ಶನವಾಗಿದ್ದು, ಲಾಕ್ ಡೌನ್ ಹೊರತಾಗಿಯೂ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹೈದರಾಬಾದ್ ನ ಅಪಾರ್ಟ್ ಮೆಂಟ್ 25 ಮಂದಿಗೆ ಮಾರಕ ಕೊರೋನಾ ಸೋಂಕು ಒಕ್ಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಮಾಡುವ ಎಡವಟ್ಟುಗಳಿಗೆ ಈ ಒಂದು ಘಟನೆ ಸ್ಪಷ್ಟ ನಿದರ್ಶನವಾಗಿದ್ದು, ಲಾಕ್ ಡೌನ್ ಹೊರತಾಗಿಯೂ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹೈದರಾಬಾದ್ ನ ಅಪಾರ್ಟ್ ಮೆಂಟ್ 25 ಮಂದಿಗೆ ಮಾರಕ ಕೊರೋನಾ  ಸೋಂಕು ಒಕ್ಕರಿಸಿದೆ.

ಹೈದರಾಬಾದ್ ನ ಓಲ್ಡ್ ಸಿಟಿಯಲ್ಲಿರುವ ಮಾದನ್ನಪೇಟೆ ಪ್ರದೇಶದಲ್ಲಿರುವ ವಸತಿ ಸಮುಚ್ಚಯದ 25 ನಿವಾಸಿಗಳಿಗೆ ಮಾರಕ ಕೊರೋನಾ ವೈರಸ್ ಸೋಂಕು ತಗುಲಿರುವುದ ಖಚಿತವಾಗಿದೆ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ (ಜಿಹೆಚ್ಎಂಸಿ) ಸ್ಥಳೀಯ ಆಯುಕ್ತ  ಅಶೋಕ್ ಸಾಮ್ರಾಟ್ ಹೇಳಿದ್ದಾರೆ.

ಬರ್ತ್ ಡೇ ಪಾರ್ಟಿ ತಂದ ಕುತ್ತು
ಪ್ರಸ್ತುತ ಕೊರೋನಾ ವೈರಸ್ ಸೋಂಕು ಕಂಡುಬಂದಿರುವ ಅಪಾರ್ಟ್ ಮೆಂಟ್ ನಿವಾಸಿಗಳೆಲ್ಲರೂ ಈ ಹಿಂದೆ ಇಲ್ಲಿನ ಮನೆಯೊಂದರಲ್ಲಿ ನಡೆದ ಬರ್ತ್ ಡೇ ಪಾರ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಇದೇ ಕಾರ್ಯಕ್ರಮದಲ್ಲಿ ಸೋಂಕಿತರೊಬ್ಬರು ಪಾಲ್ಗೊಂಡಿದ್ದು,  ಅವರಿಂದಲೇ ಎಲ್ಲರಿಗೂ ಸೋಂಕು ವ್ಯಾಪಿಸಿರುವ ಶಂಕೆ ಇದೆ. ಪ್ರಸ್ತುತ ಎಲ್ಲ ಸೋಂಕಿತರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೋಂಕಿತರೆಲ್ಲರ ಟ್ರಾವೆಲ್ ಹಿಸ್ಟರಿ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಿತರನ್ನು ಕ್ವಾರಂಟೈನ್  ಮಾಡಲು ಸಜ್ಜಾಗುತ್ತಿದ್ದಾರೆ.

ಪ್ರಸ್ತುತ ತೆಲಂಗಾಣದಲ್ಲಿ 1454 ಸೋಂಕು ಪ್ರಕರಣಗಳಿದ್ದು, 959 ಮಂದಿ ಗುಣಮುಖರಾಗಿದ್ದಾರೆ, 34 ಮಂದಿ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com