ಗುಜರಾತ್: ಪೊಲೀಸರ ಮೇಲೆ ಕಲ್ಲು ತೂರಿದ ವಲಸೆ ಕಾರ್ಮಿಕರು, ವಾಹನಗಳು ಧ್ವಂಸ!

ಕೂಡಲೇ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ವಲಸೆ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ,ವಾಹನಗಳನ್ನು ಧ್ವಂಸ ಮಾಡಿರುವ ಘಟನೆ ಗುಜರಾತಿನ ರಾಜ್ ಕೋಟ್ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ.
ವಲಸೆ ಕಾರ್ಮಿಕರ ಕಲ್ಲು ತೂರಾಟದ ಚಿತ್ರ
ವಲಸೆ ಕಾರ್ಮಿಕರ ಕಲ್ಲು ತೂರಾಟದ ಚಿತ್ರ

ರಾಜ್ ಕೋಟ್: ಕೂಡಲೇ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ವಲಸೆ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ,ವಾಹನಗಳನ್ನು ಧ್ವಂಸ ಮಾಡಿರುವ ಘಟನೆ ಗುಜರಾತಿನ ರಾಜ್ ಕೋಟ್ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ.

ಅಹಮದಾಬಾದಿನಿಂದ 215 ಕಿಲೋ ಮೀಟರ್ ದೂರದ ಶಾಪರ್ ನಲ್ಲಿ ನಡೆದ ಈ ಘಟನೆ ವೇಳೆಯಲ್ಲಿ ಕೆಲ ಪೊಲೀಸರು ಹಾಗೂ ಪತ್ರಕರ್ತರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ಪರೀಕ್ಷಿಸಿದ ನಂತರ ಉದ್ದೇಶಪೂರ್ವಕ್ಕಾಗಿ ಗಲಾಟೆಗೆ ಪ್ರೇರೆಪಿಸಿದವರು ಸೇರಿದಂತೆ 25 ವಲಸೆ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ರಾಜ್ ಕೋಟ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಬಲ್ ರಾಮ್ ಮೀನಾ ಹೇಳಿದ್ದಾರೆ. 

ತಮ್ಮ ತವರು ರಾಜ್ಯಗಳಿಗೆ ಮರಳು ಕೂಡಲೇ ವಾಹನ ವ್ಯವಸ್ಥೆ ಮಾಡುವಂತೆ ವಲಸೆ ಕಾರ್ಮಿಕರ ಗುಂಪೊಂದು ವಾಹನಗಳನ್ನು ಧ್ವಂಸ ಮಾಡಿದ್ದಾರೆ. ವಿವಿಧ ಐಪಿಸಿ ಸೆಕ್ಷನ್ ಗಳಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮೀನಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com