ಮೇ 31ರವರೆಗೆ ಲಾಕ್ ಡೌನ್ ಮುಂದುವರಿಕೆ: ರಾಷ್ಟ್ರೀಯ ವಿಪತ್ತು ಪ್ರಾಧಿಕಾರದಿಂದ ಗೃಹ ಇಲಾಖೆಗೆ ಮನವಿ

ಮೇ 18ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 3.0 ಲಾಕ್ ಡೌನ್ ಅವಧಿ ಮುಗಿಯಲಿದ್ದು ನಾಳೆಯಿಂದ ಮೇ 31ರವರೆಗೆ ಲಾಕ್ ಡೌನ್ ಮುಂದುವರೆಸುವಂತೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿಕೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಮೇ 18ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 3.0 ಲಾಕ್ ಡೌನ್ ಅವಧಿ ಮುಗಿಯಲಿದ್ದು ನಾಳೆಯಿಂದ ಮೇ 31ರವರೆಗೆ ಲಾಕ್ ಡೌನ್ ಮುಂದುವರೆಸುವಂತೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿಕೊಂಡಿದೆ.

ಈ ಸಂಬಂಧ ಅಧಿಕೃತ ಮಾಹಿತಿ ರವಾನಿಸಿರುವ ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಲಿಯು ಕೇಂದ್ರದ ಗೃಹ ಇಲಾಖೆಗೆ ಸಂದೇಶ ರವಾನಿಸಿ ಲಾಕ್ ಡೌನ್ ಮುಂದುವರೆಸುವಂತೆ ಸೂಚಿಸಿದೆ.ಕಾರ್ಯದರ್ಶಿಗಳ ನೇತೃತ್ವದ ಸಮಿತಿಯು ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ವಿಡಿಯೋ ಕಾನ್ಫರೆನ್ ನಡೆಸಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಮುಂದಾಗಿದೆ.

ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ದೇಶದಲ್ಲಿ ಇನ್ನೂ 14 ದಿನಗಳವರೆಗೆ ಲಾಕ್‌ಡೌನ್ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ ಎಂದು ಎನ್‌ಡಿಎಂಎ ಆದೇಶದಲ್ಲಿ ತಿಳಿಸಿದೆ.

ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 6 (2) (ಐ) ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ಎನ್‌ಡಿಎಂಎ, ಮೇ 31 ರವರೆಗೆ ಲಾಕ್‌ಡೌನ್ ಕ್ರಮಗಳನ್ನು ಮುಂದುವರಿಸಲು ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ರಾಜ್ಯ ಅಧಿಕಾರಿಗಳ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನಿರ್ದೇಶಿಸುತ್ತದೆ. ಎಂದು ಎನ್‌ಡಿಎಂಎ ಸದಸ್ಯ ಕಾರ್ಯದರ್ಶಿ ಜಿವಿವಿ ಶರ್ಮಾ ಹೇಳಿದರು. ಇದೇ ವೇಳೆ ಕೋವಿಡ್ ಹರಡುವಿಕೆಯನ್ನು ಒಳಗೊಂಡಿರುವಾಗ ಆರ್ಥಿಕ ಚಟುವಟಿಕೆಗಳನ್ನು ತೆರೆಯುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳಲ್ಲಿ ಅಗತ್ಯ ಮಾರ್ಪಾಟು ಮಾಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಪ್ರಾಧಿಕಾರ  ನಿರ್ದೇಶಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಕೋವಿಡ್ ಸಾವಿನ ಸಂಖ್ಯೆ 2,872 ಕ್ಕೆ ಏರಿದೆ ಮತ್ತು ಒಟ್ಟು ಪ್ರಕರಣಗಳ ಸಂಖ್ಯೆ ಭಾನುವಾರ ಬೆಳಿಗ್ಗೆ 90,927 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com