ವಲಸಿಗ ಕಾರ್ಮಿಕರ ಬಗ್ಗೆ ಉತ್ತರ ಪ್ರದೇಶ ಸಚಿವರ ವಿವಾದಾತ್ಮಕ ಹೇಳಿಕೆ! 

ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಯತ್ನಿಸುತ್ತಿದ್ದರೆ ಉತ್ತರ ಪ್ರದೇಶ ಸಚಿವ ಉದಯ್ ಭಾನ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Published: 17th May 2020 11:24 AM  |   Last Updated: 17th May 2020 11:24 AM   |  A+A-


Some migrant workers behaving like thieves, robbers, says Uttar Pradesh minister Uday Bhan Singh

ವಲಸಿಗ ಕಾರ್ಮಿಕರ ಬಗ್ಗೆ ಉತ್ತರ ಪ್ರದೇಶ ಸಚಿವರ ವಿವಾದಾತ್ಮಕ ಹೇಳಿಕೆ!

Posted By : Srinivas Rao BV
Source : Online Desk

ಲಖನೌ: ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಯತ್ನಿಸುತ್ತಿದ್ದರೆ ಉತ್ತರ ಪ್ರದೇಶ ಸಚಿವ ಉದಯ್ ಭಾನ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಸರ್ಕಾರಗಳಿಂದ ನಿರಂತರ ಮನವಿಯ ಹೊರತಾಗಿಯೂ ವಲಸಿಗ ಕಾರ್ಮಿಕರು ಊರುಗಳಿಗೆ ತೆರಳುತ್ತಿದ್ದಾರೆ. ಈ ಪೈಕಿ ಕೆಲವರು ಡಕಾಯಿತರು ಕಳ್ಳರಂತೆ ವರ್ತಿಸುತ್ತಿದ್ದಾರೆ ಎಂದು ಉದಯ ಭಾನ್ ಸಿಂಗ್ ಆರೋಪಿಸಿದ್ದಾರೆ. 

ವಲಸಿಗ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಸಂವೇದನೆಯಿಂದ ವರ್ತಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಕಾರ್ಮಿಕರಿಗಾಗಿ ಆಹಾರ ಹಾಗೂ ಇನ್ನಿತರ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಮಿಕರು ಇರುವ ಸ್ಥಳಗಳಲ್ಲಿಯೇ ಉಳಿಯುವುದಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲವರು ಕಳ್ಳರು ಡಕಾಯಿತರಂತೆ ಕೃಷಿ ಭೂಮಿಗಳ ಮೂಲಕ ಹಾದು ಹೋಗಿ ತಮ್ಮ ಊರು ಸೇರಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. 

ಸಚಿವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗತೊಡಗಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp