ಲಾಕ್'ಡೌನ್ 4.0: ವಲಯಗಳು, ಬಸ್ ಸಂಚಾರ ಕುರಿತ ನಿರ್ಧಾರ ರಾಜ್ಯಗಳಿಗೇ ಬಿಟ್ಟ ಕೇಂದ್ರ ಸರ್ಕಾರ

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್'ಡೌನ್'ನ್ನು ಕೇಂದ್ರ ಸರ್ಕಾರ ಇನ್ನೂ 2 ವಾರಗಳ ಕಾಲ ಅಂದರೆ ಮೇ.18 ರಿಂದ ಮೇ.31ರವರೆಗೆ ವಿಸ್ತರಣೆ ಮಾಡಿದೆ. ಆದರೆ, ವಲಯ ನಿರ್ಧಾರ ಹಾಗೂ ಬಸ್ ಗಳ ಸಂಚಾರ ಕುರಿತು ನಿರ್ಧಾರಗಳ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್'ಡೌನ್'ನ್ನು ಕೇಂದ್ರ ಸರ್ಕಾರ ಇನ್ನೂ 2 ವಾರಗಳ ಕಾಲ ಅಂದರೆ ಮೇ.18 ರಿಂದ ಮೇ.31ರವರೆಗೆ ವಿಸ್ತರಣೆ ಮಾಡಿದೆ. ಆದರೆ, ವಲಯ ನಿರ್ಧಾರ ಹಾಗೂ ಬಸ್ ಗಳ ಸಂಚಾರ ಕುರಿತು ನಿರ್ಧಾರಗಳ ಜವಾಬ್ದಾರಿಯನ್ನು ಆಯಾ ರಾಜ್ಯಗಳಿಗೆ ನೀಡಿದೆ. 

ಅಂತರ್ ರಾಜ್ಯ ಹಾಗೂ ರಾಜ್ಯಗಳ ಒಳಗೆ ಪ್ರಯಾಣಿಕರ ಬಸ್ ಸಂಚಾರಕ್ಕೆ ನಿನ್ನೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಪರಸ್ಪರ ಸಮ್ಮತಿಯ ಮೇಲೆಗೆ ರಾಜ್ಯಗಳ ಮಧ್ಯೆ ಬಸ್ ಸೇವೆ ಆರಂಭಿಸಲು ಅನುಮತಿ ನೀಡಲಾಗಿದೆ. ರಾಜ್ಯಗಳ ಒಳಗೆ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಮಾತ್ರ ಆಯಾ ರಾಜ್ಯ ಸರ್ಕಾರಗಳೇ ನಿರ್ಧಾರ ಕೈಗೊಳ್ಳಲಿವೆ ಎಂದು ಕೇಂದ್ರ ಸರ್ಕಾರ ತಾನು ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ಬಸ್ ಸಂಚಾರ ಹಿಂದಿನಿಂತೆ ಇರುವುದಿಲ್ಲ. ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ. 

ಇನ್ನು ವಲಯ ನಿರ್ಧಾರ ಅಧಿಕಾರ ರಾಜ್ಯ ನೀಡಿರುವ ಕೇಂದ್ರ ಸರ್ಕಾರ, ಕೊರೋನಾ ಪ್ರಕರಣಗಳನ್ನು ಆಧರಿಸಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನು ಕೇಂದ್ರದ ಬದಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳೇ ನಿರ್ಧರಿಸಬೇಕೆಂದು ತಿಳಿಸಿದೆ. 

ಈ ವಲಯಗಳು ಜಿಲ್ಲಾಧಿಕಾರದ ನಿಯಂತ್ರಣದಲ್ಲಿ ಇರಲಿವೆ. ಕಂಟೈನ್ಮೆಂಟ್ ಪ್ರದೇಶದಲ್ಲಿ ಕೇವಲ ಅಗತ್ಯ ಸೇವೆಗಳಿಗಷ್ಟೇ ಅವಕಾಶ ಇರಲಿದೆ. ಜನರ ಚಲನ-ವಲನದ ಮೇಲೆ ಕಠಿಣ ನಿರ್ಬಂಧಗಳು ಹಿಂದಿನಿಂತೆಯೇ ಮುಂದುವರಿಯಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com