ವಲಸೆ ಕಾರ್ಮಿಕರ ಪರ ಧರಣಿ:  ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಬಂಧನ 

ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಸೋಮವಾರ ಇಲ್ಲಿನ ರಾಜ್‌ಘಾಟ್‌ನಲ್ಲಿ ಧರಣಿ ನಡೆಸಿದ್ದು  ವಲಸೆ ಕಾರ್ಮಿಕರು ತಮ್ಮ ತಮ್ಮ ಮನೆಗಳಿಗೆ ತಲುಪಲು ನೆರವಾಗಲು ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದರು.
ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ

ನವದೆಹಲಿ: ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಸೋಮವಾರ ಇಲ್ಲಿನ ರಾಜ್‌ಘಾಟ್‌ನಲ್ಲಿ ಧರಣಿ ನಡೆಸಿದ್ದು  ವಲಸೆ ಕಾರ್ಮಿಕರು ತಮ್ಮ ತಮ್ಮ ಮನೆಗಳಿಗೆ ತಲುಪಲು ನೆರವಾಗಲು ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದರು.

ಸಿನ್ಹಾ ಅವರ ಜತೆ ಎಎಪಿ ಮುಖಂಡರಾದ ಸಂಜಯ್ ಸಿಂಗ್ ಮತ್ತು ದಿಲೀಪ್ ಪಾಂಡೆ ಕೂಡ ಧರಣಿಯಲ್ಲಿ ಭಾಗವಹಿಸಿದ್ದರು.ಪರ ಊರಲ್ಲಿ ಸಿಕ್ಕುಬಿದ್ದಿರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಹಿಂದಿರುಗಿಸಲು ಸರಿಯಾದ ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸಿದರು

ಇನ್ನು ದಿನದ ಅಂತ್ಯದ ವೇಳೆಗೆ  ದೆಹಲಿ ಪೊಲೀಸರು ಸಿನ್ಹಾ ಸೇರಿದಂತೆ ಧರಣಿ ನಿರತರನ್ನು ಬಂಧಿಸಿ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. "ನಮ್ಮನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ" ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಸಧ್ಯ ಧರಣಿ ನಿರತರನ್ನು ಸ್ಥಳದಿಂದ ತೆರವು ಮಾಡಲಾಗಿದೆ ಎಂದು ದೆಹಲಿಯ  ಉಪ ಪೊಲೀಸ್ ಆಯುಕ್ತ (ಕೇಂದ್ರ) ಸಂಜಯ್ ಭಾಟಿಯಾ ತಿಳಿಸಿದ್ದಾರೆ. ಅಲ್ಲದೆ ಬಂಧಿತರನ್ನು ಶೀಘ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಾಜಿ ಬಿಜೆಪಿ ಮುಖಂಡ ಮತ್ತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಿನ್ಹಾ,  ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಗಳವರು , ರಸ್ತೆಗಳಲ್ಲಿ ನಡೆಯುತ್ತಾ ಊರಿಗೆ ತೆರಳುವ ವಲಸೆ ಕಾರ್ಮಿಕರ ಕಷ್ಟಕ್ಕೆ ಕುರುಡಾಗಿದ್ದಾರೆ "ನಮ್ಮ ಸರಳ ಬೇಡಿಕೆಯೆಂದರೆ, ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಪಡೆಗಳಿಗೆ, ಅವರ ಆಜ್ಞೆಯ ಮೇರೆಗೆ ಎಲ್ಲಾ ಸಂಪನ್ಮೂಲಗಳೊಂದಿಗೆ ಮತ್ತು ಅವರು ಬೇಡಿಕೆ ಇಡಬಹುದಾದ ಮಾಡಬಹುದಾದ ಯಾವುದೇ ನಾಗರಿಕ ಸಂಪನ್ಮೂಲಗಳೊಂದಿಗೆ ವಲಸೆ ಕಾರ್ಮಿಕರನ್ನು ಗೌರವಯುತವಾಗಿ ತಮ್ಮ ಮನೆಗಳಿಗೆ ಕಳುಹಿಸಬೇಕು"  ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com