ದೇಶದಾದ್ಯಂತ ಇಂದಿನಿಂದ ಲಾಕ್'ಡೌನ್ 4.0 ಜಾರಿ: ಬಸ್, ಆಟೋ, ಕ್ಯಾಬ್ ಸೇವೆಗಳಿಗೆ ಕೇಂದ್ರ ಸಮ್ಮತಿ

ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್'ಡೌನ್'ನ್ನು ಕೇಂದ್ರ ಸರ್ಕಾರ ಇನ್ನೂ 2 ವಾರಗಳ ಕಾಲ ಅಂದರೆ ಮೇ.18 ರಿಂದ ಮೇ.31ರವರೆಗೆ ವಿಸ್ತರಣೆ ಮಾಡಿದೆ. ಇದರಂತೆ ಸೋಮವಾರದಿಂದ ಲಾಕ್'ಡೌನ್ 4.0 ಜಾರಿಯಾಗಿ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ 54 ದಿನಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಲಾಕ್'ಡೌನ್'ನ್ನು ಕೇಂದ್ರ ಸರ್ಕಾರ ಇನ್ನೂ 2 ವಾರಗಳ ಕಾಲ ಅಂದರೆ ಮೇ 18 ರಿಂದ ಮೇ.31ರವರೆಗೆ ವಿಸ್ತರಣೆ ಮಾಡಿದೆ. ಇದರಂತೆ ಸೋಮವಾರದಿಂದ ಲಾಕ್'ಡೌನ್ 4.0 ಜಾರಿಯಾಗಿ ಬಂದಿದೆ. 

ಲಾಕ್'ಡೌನ್ 4.0 ಸಂಬಂಧ ಕೇಂದ್ರ ಗೃಹ ಸಚಿವಾಲಯ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, 54 ದಿನಗಳಿಂದ ಇದ್ದ ಹಲವು ನಿರ್ಬಂಧಗಳನ್ನು ಸಡಿಗೊಳಿಸಿದೆ. 

ಬಸ್, ಓಲಾ, ಉಬರ್ ನಂತಹ ಕ್ಯಾಬ್, ಟ್ಯಾಕ್ಸಿ, ಆಟೋ ಸಂಚಾರ, ಕ್ಷೌರದಂಗಡಿ, ಕ್ಲಿನಿಕ್ ಆಸ್ಪತ್ರೆಗಳಲ್ಲಿ ಒಪಿಡಿ, ಪ್ರೇಕ್ಷಕರಿಲ್ಲದೆ ಕ್ರೀಡಾಂಗಣ ತೆರೆಯಲು ಹಾಗೂ ಕೆಂಪು ವಲಯದಲ್ಲೂ ಫ್ಲಿಪ್ ಕಾರ್ಜ್, ಅಮೆಜಾನ್ ನಂತರ ಇ ಕಾಮರ್ಸ್ ಕಂಪನಿಗಳು ವ್ಯವಹರಿಸಲು ಅನುಮತಿ ನೀಡಲಾಗಿದೆ. 

ಆದರೆ, ರೈಲು ಹಾಗೂ ವಿಮಾನಗಳ ಸೇವೆಗಳ ಮೇಲಿನ ನಿರ್ಬಂಧವನ್ನು ಎಂದಿನಂತೆ ಮುಂದುುವರೆಸಲಾಗಿದೆ. ಈಗಾಗಲೇ ಚಲಿಸುತ್ತಿರುವ ಶ್ರಮಿಕ ಸ್ಪೆಷಲ್, ರಾಜಧಾನಿ ಎಕ್ಸ್'ಪ್ರೆಸ್, ಸರಕು ಸಾಗಣೆ ರೈಲು ಹಾಗೂ ಕರೆತರಲು ಕಾರ್ಯಾಚರಿಸುತ್ತಿರುವ ವಿಮಾನ, ಸರಕು ಸಾಗಣೆ ವಿಮಾನ ಹಾಗೂ ಏರ್ ಆ್ಯಂಬುಲೆನ್ಸ್ ಗಳಿಗೆ ನಿರ್ಬಂಧ ಇರುವುದಿಲ್ಲ. 

ಇನ್ನು ಕೆಂಪು ವಲಯದಲ್ಲಿನ ಕಂಟೈನ್ಮೆಟ್ ಪ್ರದೇಶಗಳಲ್ಲಿ ಲಾಕ್'ಡೌನ್ ನಿರ್ಬಂಧಗಳು ಹಿಂದಿನಂತೆಯೇ ಮುಂದುವರೆಯಲಿದ್ದು, ಜನರ ಅಗತ್ಯ ಚಟುವಟಿಕೆಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಉಳಿದ ಕಾರಣಗಳಿಗೆ ಜನರು ಕಂಟೈನ್ಮೆಂಟ್ ವಲಯಗಳಿಂದ ಹೊರಗೆ ಸಂಚರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ರೋಗ ಲಕ್ಷಣ ಇರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷದ ಒಳಗಿನ ಮಕ್ಕಳು ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ವೇಳೆ ಮನೆಯಿಂದ ಹೊರಬಂದು ಓಡಾಡುವುದಕ್ಕೆ ಅವಕಾಶ ಇರುವುದಿಲ್ಲ. 

ಇದೇ ವೇಳೆ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಜನರ ಅನಗತ್ಯ ಓಡಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com