ವಿವಾಹದ ನಂತರ ಪ್ರತ್ಯೇಕತೆಯ ಭಯ: ತಮಿಳುನಾಡಿನ ನಾಮಕ್ಕಲ್ ನಲ್ಲಿ ಇಬ್ಬರು ಮಹಿಳೆಯರ ಆತ್ಮಹತ್ಯೆ

ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಾಮಕ್ಕಲ್: ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ನಲ್ಲಿ ನಡೆದಿದೆ.

ಪೆರಿಯಮ್ಮಾಳ್ ನಿವಾಸಿ, ಎನ್ ಜ್ಯೋತಿ, ಮೃತ ದುರ್ದೈವಿ, ಕೌಟುಂಬಿಕ ವಿವಾದದಿಂದಾಗಿ ಕೆಲವು ತಿಂಗಳ ಹಿಂದೆ ತನ್ನ ಗಂಡನಿಂದ ಬೇರ್ಪಟ್ಟ ಮಹಿಳೆ ಮತ್ತು ತನ್ನ ಮೂರು ವರ್ಷದ ಮಗಳೊಂದಿಗೆ ಅಜ್ಜಿಯ ಮನೆಯಲ್ಲಿ ತಂಗಿದ್ದಳು.

ಈಕೆ ತನ್ನ ಗಂಡನಿಂದ ಬೇರ್ಪಟ್ಟ ನಂತರ, ಪೆರಿಯಾ ಮನಾಲಿಯಲ್ಲಿನ ವಿದ್ಯುತ್ ಮಗ್ಗದ ಘಟಕದಲ್ಲಿ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸಿದ್ದಳು. ಕೆಲಸ ಮಾಡುವ ಸ್ಥಳದಲ್ಲಿ   ಕೊಟ್ಟ ಪಾಳ್ಯಂ ನ ಪ್ರಿಯಾ ಎಂಬಾಕೆಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ಇಬ್ಬರು ಆತ್ಮೀಯರಾಗಿದ್ದರು.

ಆದರೆ, ಪ್ರಿಯಾಳ ಪೋಷಕರು ಮೇ 27  ಪ್ರಿಯಾಳಿಗೆ ಮದುವೆಯನ್ನು ನಿಗದಿಪಡಿಸಿದ್ದರು. ಇದರಿಂದ ಇಬ್ಬರು ಮಹಿಳೆಯರು ಅಸಮಾಧಾನಗೊಂಡಿದ್ದರು,ಮತ್ತು ಪ್ರಿಯಾ ಮದುವೆಯಾದ ನಂತರ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂಬ ಭಯದಲ್ಲಿದ್ದರು.ಶನಿವಾರ ಪ್ರಿಯಾ ಜ್ಯೋತಿ ನಿವಾಸಕ್ಕೆ ತೆರಳಿದ್ದಳು, ಸ್ವಲ್ಪ ಸಮಯದ ನಂತರ ಪ್ರಿಯಾ
ಸಹೋದರ ಜ್ಯೋತಿ ಮನೆಗೆ ತೆರಳಿ ಆಕೆಯನ್ನು ಹುಡುಕಾಡಿದ್ದ,  ಜ್ಯೋತಿ ಮನೆಯ ಮುಂದಿನ ಬಾಗಿಲು ಮುಚ್ಚಿತ್ತು.

ಕಿಟಕಿ ಮೂಲಕ ನೋಡಿದಾಗ ಇಬ್ಬರು ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಇಬ್ಬರು ದೈಹಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ., ಈ ಸಂಬಂಧ ಇಲಾಚಿಪಾಲ್ಯಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com