ಲಾಕ್ ಡೌನ್ ಕಂಟಕ: ಮಗಳ ಕತ್ತು ಹಿಸುಕಿ, ಮತ್ತಿಬ್ಬರನ್ನು ನೀರಲ್ಲಿ ಮುಳುಗಿಸಿ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ!

ಕೊರೋನಾ ಹರಡದಂತೆ ತಪ್ಪಿಸಲು ಲಾಕ್ ಡೌನ್ ಮಾಡಲಾಗಿತ್ತು. ಆದರೆ ಇಲ್ಲಿ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿತ್ತು. ಕೆಲಸ ಕಳೆದುಕೊಂಡಿದ್ದ ಪತಿಯನ್ನು ಪತ್ನಿ ಹೀಯಾಳಿಸಿದ್ದಕ್ಕೆ ಕೋಪಗೊಂಡು ಮಗಳನ್ನು ಕತ್ತು ಹಿಸುಕಿ, ಇನ್ನಿಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

Published: 19th May 2020 11:48 AM  |   Last Updated: 19th May 2020 11:48 AM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಚೆನ್ನೈ: ಕೊರೋನಾ ಹರಡದಂತೆ ತಪ್ಪಿಸಲು ಲಾಕ್ ಡೌನ್ ಮಾಡಲಾಗಿತ್ತು. ಆದರೆ ಇಲ್ಲಿ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿತ್ತು. ಕೆಲಸ ಕಳೆದುಕೊಂಡಿದ್ದ ಪತಿಯನ್ನು ಪತ್ನಿ ಹೀಯಾಳಿಸಿದ್ದಕ್ಕೆ ಕೋಪಗೊಂಡು ಮಗಳನ್ನು ಕತ್ತು ಹಿಸುಕಿ, ಇನ್ನಿಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. 

ತಮಿಳುನಾಡಿನ ಶ್ರೀಪೆರಂಬದೂರ್ ಎಂಬಲ್ಲಿ ಈ ಘಡನೆ ನಡೆದಿದೆ. 37 ವರ್ಷ ಆರುಮುಗಂ ಎಂಬಾತ ತನ್ನ ಮಕ್ಕಳಾದ 12 ವರ್ಷದ ರಾಜೇಶ್ವರಿ, ಶಾಲಿನಿ ಹಾಗೂ ಸೇತುರಾಂನನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 50 ದಿನಗಳಿಂದ ಕೆಲಸವಿಲ್ಲದೆ ಆರುಮುಗಂ ಮನೆಯಲ್ಲೇ ಇದ್ದ. ಇನ್ನು ಪತ್ಮಿ ಗೋಮತಿ ಅಮ್ಮಲ್ ಹೌಸ್ ಕೀಪರ್ ಆಗಿದ್ದು ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಲಾಕ್ ಡೌನ್ ವೇಳೆ ಬೇರೊಂದು ಕೆಲಸ ಹುಡುಕಿ ಎಂದು ಪತ್ನಿ ಹೇಳುತ್ತಿದ್ದರಿಂದ ಇಬ್ಬರ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. 

ಕಳೆದ ಸೋಮವಾರ ಪತ್ನಿ ಕೆಲಸಕ್ಕೆ ಹೋದ ನಂತರ ಆರುಮುಗಂ 12 ವರ್ಷದ ಮಗಳ ಕತ್ತು ಹಿಸುಕಿ ಕೊಂದಿದ್ದಾನೆ. ನಂರತ ಶಾಲಿನಿ ಮತ್ತು ಸೇತುರಾಂನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾನೆ. ನಂತರ ಆತ ಮನೆಯ ಪಕ್ಕದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದ ಗೋಮತಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಮೂವರು ಮಕ್ಕಳು ಮತ್ತು ಪತಿ ಶವ ಕಂಡು ಕಿರುಚಿಕೊಂಡಿದ್ದಾಳೆ. ಕೂಡಲೇ ನೆರೆಮನೆಯವರು ಬಂದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸಿದರು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp