ಜೂನ್ 1ರಿಂದ ರೈಲು ಸಂಚಾರ ಆರಂಭ, ಎರಡೇ ಗಂಟೆಯಲ್ಲಿ 1.5 ಲಕ್ಷ ಟಿಕೆಟ್ ಬುಕ್ಕಿಂಗ್!

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಮಾರ್ಚ್ 25ರಂದು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ನಂತರ ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಈಗ ಜೂನ್ 1ರಿಂದ ಆರಂಭಿಸಲಾಗುತ್ತಿದ್ದು, ಬುಕ್ಕಿಂಗ್ ಆರಂಭಿಸಿದ ಮೊದಲ ಎರಡು ಗಂಟೆಯಲ್ಲಿ ಸುಮಾರು 1.5 ಲಕ್ಷ ಟಿಕಿಟ್ ಬುಕ್ಕಿಂಗ್ ಆಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಮಾರ್ಚ್ 25ರಂದು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ನಂತರ ಸ್ಥಗಿತಗೊಂಡಿದ್ದ ರೈಲು ಸೇವೆಯನ್ನು ಈಗ ಜೂನ್ 1ರಿಂದ ಆರಂಭಿಸಲಾಗುತ್ತಿದ್ದು, ಬುಕ್ಕಿಂಗ್ ಆರಂಭಿಸಿದ ಮೊದಲ ಎರಡು ಗಂಟೆಯಲ್ಲಿ ಸುಮಾರು 1.5 ಲಕ್ಷ ಟಿಕಿಟ್ ಬುಕ್ಕಿಂಗ್ ಆಗಿದೆ.

ಐಆರ್‌ಸಿಟಿಸಿ ಆನ್ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾದ ಎರಡೇ ಗಂಟೆಯಲ್ಲಿ 1,49,025 ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಜೂನ್ 1ರಿಂದ ಸಂಚರಿಸಲಿರುವ ಒಟ್ಟು 100 ಜೊತೆ ರೈಲುಗಳನ್ನು ಪಟ್ಟಿಯನ್ನು ಬಿಡುಗಡೆ ಮಾಡಿದ್ದು,  ಇದು ಶ್ರಮಿಕ ರೈಲುಗಳ ಹೊರತಾದ ಹೆಚ್ಚುವರಿ ರೈಲು ಸೇವೆಯಾಗಿರಲಿದೆ ಎಂದು ಸ್ಪಷ್ಟಪಡಿಸಿದೆ.

ಇದರಲ್ಲಿ ಮುಂಬಯಿ ಸಿಎಸ್‌ಟಿಯಿಂದ ಗದಗ, ಮುಂಬಯಿ ಸಿಎಸ್‌ಟಿಯಿಂದ ಕೆಎಸ್‌ಆರ್ ಬೆಂಗಳೂರು, ದಾಣಾಪುರದಿಂದ ಕೆಎಸ್‌ಆರ್ ಬೆಂಗಳೂರು, ಹೌರಾದಿಂದ ಯಶವಂತಪುರ ವರಗೆ ದುರಂತೊ, ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಯಶವಂತಪುರದಿಂದ ಶಿವಮೊಗ್ಗ ಗಮ್ಯಸ್ಥಾನಗಳಿಗೆ ಜನಶತಾಬ್ದಿ ರೈಲು ಸೇವೆಗಳು ಸೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com