ವಿಶ್ವಸಂಸ್ಥೆ ಅಧಿಕಾರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಸುಬ್ರಮಣಿಯನ್ ಸ್ವಾಮಿ

ಮುಸ್ಲಿಮರ ಬಗ್ಗೆತಾನು ಹೇಳಿರುವೆನೆನ್ನಲಾದ  ವಿವಾದಿತ  ಹೇಳಿಕೆಯು "ಕಟ್ ಅಂಡ್ ಪೇಸ್ಟ್ ಪ್ರೊಡಕ್ಷನ್" ನ ಫಲವಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯ ಮಾನವ ಹಕ್ಕುಗಳ  ಅಧಿಕಾರಿಯೊಬ್ಬರ ಟೀಕೆಗೆ ತಿರುಗೇಟು ಕೊಟ್ಟಿದ್ದಾರೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ವಿಶ್ವಸಂಸ್ಥೆ: ಮುಸ್ಲಿಮರ ಬಗ್ಗೆತಾನು ಹೇಳಿರುವೆನೆನ್ನಲಾದ ವಿವಾದಿತ ಹೇಳಿಕೆಯು "ಕಟ್ ಅಂಡ್ ಪೇಸ್ಟ್ ಪ್ರೊಡಕ್ಷನ್" ನ ಫಲವಾಗಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯ ಮಾನವ ಹಕ್ಕುಗಳ  ಅಧಿಕಾರಿಯೊಬ್ಬರ ಟೀಕೆಗೆ ತಿರುಗೇಟು ಕೊಟ್ಟಿದ್ದಾರೆ.

"ಅದು ಕಟ್ ಆಂಡ್ ಪೇಸ್ಟ್ ಪ್ರೊಡಕ್ಷನ್ ಸಂದರ್ಶನದ ಭಾಗವಾಗಿದ್ದು ನನ್ನ 2-ಗಂಟೆಗಳ ಸಂದರ್ಶನ ಟೇಪ್ ಅನ್ನು ಅವರು ನನಗೆ ನೀಡಲು ನಿರಾಕರಿಸುತ್ತಿದ್ದಾರೆ" ಬಿಜೆಪಿ ಸಂಸದರು ಆರೋಪಿಸಿದ್ದಾರೆ. ಅಲ್ಲದೆ ಅಂತಹಾ ಅಧಿಕಾರಿಯ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಲು ಅವರು ತೀರ್ಮಾನಿಸಿದ್ದಾರೆ. 

ಇದಕ್ಕೂ ಮುನ್ನ, ಅಂಡರ್-ಸೆಕ್ರೆಟರಿ ಜನರಲ್ ಅದಾಮಾ ಡಿಯೆಂಗ್ ಸೋಮವಾರ ಸ್ವಾಮಿಗೆ "ಎಲ್ಲ ಜನರು ಸಮಾನರಲ್ಲ" ಎಂದು ಹೇಳಲಾದ ಹೇಳಿಕೆಗಳು ಮತ್ತು "ಮುಸ್ಲಿಮರು ಇತರರಂತೆ ಸಮಾನ ವರ್ಗದವರಲ್ಲ" ಎಂದಿರುವುದು ಅತ್ಯಂತ ಆತಂಕಕಾರಿ. "ದ್ವೇಷದ ಮಾತುಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳು ಮತ್ತು ಮೌಲ್ಯಗಳಿಗೆ ವಿರುದ್ಧವಾಗಿದೆ" ಎಂದಿದ್ದರು.

ಇದಕೆ ಉತ್ತರಾವಾಗಿ ಬಿಜೆಪಿ ನಾಯಕರು ಐಎಎನ್ಎಸ್ ಜೊತೆ ಮಾತನಾಡುವಾಗ, ಆರೋಪ ಮಾಡುವ ಮುನ್ನ ಹೇಳೀಕೆಯ ಮೂಲ ಪತ್ತೆಹಚ್ಚಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ನರಮೇಧ ತಡೆಗಟ್ಟುವಿಕೆಯ ವಿಶೇಷ ಸಲಹೆಗಾರರೂ ಆಗಿರುವ ಡಿಯೆಂಗ್, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಂಗೀಕರಿಸಿದಾಗಿನಿಂದ "ಹೆಚ್ಚಿದ ದ್ವೇಷದ ಮಾತು ಮತ್ತು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದ ವರದಿಗಳು" ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕುತೂಹಲಕಾರಿಯಾಗಿ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಮೇತರರ ಮೇಲಿನ ಹಿಂಸಾತ್ಮಕ ದಾಳಿಯನ್ನು "ಕಿರುಕುಳ ಎಂದು ಆರೋಪಿಸಲಾಗಿದೆ" ಎಂದು ಅವರು ಬಣ್ಣಿಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಪಾಕಿಸ್ತಾನ ಮೂಲದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ಸಂವಿಧಾನದಲ್ಲಿ ಹಿಂದೂಗಳಿಗೆ ಮುಸ್ಲಿಮರು ಸಮಾನರಲ್ಲ ಅಂತ ನಾನು ಹೇಳಿದ್ದಾಗಿ ಆರೋಪಿಸಿ ಪ್ರೆಸ್ ನೋಟ್ ಬಿಡುಗಡೆಗೊಳಿಸಲಾಗಿದೆ. ಆದರೆ ಇದು ಶುದ್ದ ಸುಳ್ಳು ಈ ಕುರಿತಂತೆ ಅವರ ವಿರುದ್ಧ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com