ಸಿಂಹಗಳ ಹಿಂಡಿನ ನಡುವೆ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಹೆರಿಗೆ!  

ಸಿಂಹಗಳ ಹಿಂಡು ಸುತ್ತುವರಿದ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಹೆರಿಗೆಯಾಗಿರುವ ವಿಲಕ್ಷಣ ಘಟನೆ ಗುಜರಾತ್ ನ ಗಿರ್ ಸೋಮನಾಥ್ ನಲ್ಲಿ ವರದಿಯಾಗಿದೆ. 
ಸಿಂಹಗಳ ಹಿಂಡಿನ ನಡುವೆ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಹೆರಿಗೆ!
ಸಿಂಹಗಳ ಹಿಂಡಿನ ನಡುವೆ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಹೆರಿಗೆ!

ಗಿರ್ ಸೋಮನಾಥ್: ಸಿಂಹಗಳ ಹಿಂಡು ಸುತ್ತುವರಿದ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಹೆರಿಗೆಯಾಗಿರುವ ವಿಲಕ್ಷಣ ಘಟನೆ ಗುಜರಾತ್ ನ ಗಿರ್ ಸೋಮನಾಥ್ ನಲ್ಲಿ ವರದಿಯಾಗಿದೆ. 

ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯ ಮನೆಗೆ ಆಂಬುಲೆನ್ಸ್ ಆಗಮಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯದಲ್ಲಿ ನಾಲ್ಕು ಸಿಂಹಗಳು ಆಂಬುಲೆನ್ಸ್ ನ ಸುತ್ತುವರೆದಿದ್ದವು ಬೇರೆ ದಾರಿ ಇಲ್ಲದೇ ರಸ್ತೆಯಲ್ಲಿಯೇ ನಿಂತ ಆಂಬುಲೆಲ್ಸ್ ನಲ್ಲಿದ್ದ ಮಹಿಳೆಗೆ ಹೆರಿಗೆಯಾಗಿದೆ. 

ತುರ್ತು ಆರೋಗ್ಯ ಸಿಬ್ಬಂದಿಗಳು ಹೆರಿಗೆ ಮಾಡಿಸಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಸುಮಾರು 20 ನಿಮಿಷಗಳು ಸಿಂಹಗಳು ಅದೇ ಸ್ಥಳದಲ್ಲಿದ್ದವು ನಂತರ ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com