ನಾಳೆಯಿಂದ ಚೆನ್ನೈ ಹೊರತುಪಡಿಸಿ ತಮಿಳುನಾಡಿನಾದ್ಯಂತ ಆಟೋರಿಕ್ಷಾ ಸಂಚಾರಕ್ಕೆ ಅನುಮತಿ

ಮಹಾಮಾರಿ ಕೊರೋನಾ ವೈರಸ್ ನಿಂದ ತತ್ತರಿಸಿರುವ ತಮಿಳುನಾಡಿನಲ್ಲೂ ಲಾಕ್ ಡೌನ್ ಸಡಿಸಲಾಗುತ್ತಿದ್ದು, ಮೇ 23ರಿಂದ ಚೆನ್ನೈ ಹೊರತುಪಡಿಸಿ ರಾಜ್ಯಾದ್ಯಂತ ಆಟೋರಿಕ್ಷಾ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಕರ ಮಿತಿ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಮಹಾಮಾರಿ ಕೊರೋನಾ ವೈರಸ್ ನಿಂದ ತತ್ತರಿಸಿರುವ ತಮಿಳುನಾಡಿನಲ್ಲೂ ಲಾಕ್ ಡೌನ್ ಸಡಿಸಲಾಗುತ್ತಿದ್ದು, ಮೇ 23ರಿಂದ ಚೆನ್ನೈ ಹೊರತುಪಡಿಸಿ ರಾಜ್ಯಾದ್ಯಂತ ಆಟೋರಿಕ್ಷಾ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಕರ ಮಿತಿ ಸೇರಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

ಚೆನ್ನೈ ಮಹಾನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಿಲ್ಲ ಮತ್ತು ರಾಜ್ಯದ ಕಂಟೈನ್ ಮೆಂಟ್ ಝೋನ್ ಗಳಲ್ಲೂ ವಾಹನ ಓಡಾಟಕ್ಕೆ ಅನುಮತಿ ಇಲ್ಲ ಎಂದು ತಮಿಳುನಾಡು ಸರ್ಕಾರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಚೆನ್ನೈ ಮಹಾನಗರ ಹಾಗೂ ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ರಾಜ್ಯದ ಇತರೆ ಎಲ್ಲಾ ಪ್ರದೇಶಗಳಲ್ಲೂ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಆಟೋ ಮತ್ತು ಸೈಕಲ್ ರಿಕ್ಷಾ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಆಟೋದಲ್ಲಿ ಚಾಲಕ ಮತ್ತು ಒಬ್ಬ ಪ್ರಯಾಣಿಕ ಮಾತ್ರ ತೆರಳಬೇಕು. ದಿನಕ್ಕೆ ಮೂರು ಬಾರಿ ಆಟೋ ಸಾನಿಟೈಸ್ ಮಾಡಬೇಕು. ಚಾಲಕ ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಪ್ರಯಾಣಿಕರಿಗಾಗಿ ಆಟೋದಲ್ಲಿ ಹ್ಯಾಂಡ್ ಸಾನಿಟೈಸರ್ ಇರಬೇಕು. ಚಾಲಕ ಹಾಗಾಗ ಕೈ ತೊಳೆಯಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com