'ಕೊರೋನಾ' ಎಂದು ಕರೆಯುತ್ತಿದ್ದರು, ಮುಖ ಮುಚ್ಚಿಕೊಳ್ಳುತ್ತಿದ್ದರು: ಕೋಲ್ಕತ್ತಾದಲ್ಲಿ ಅನುಭವಿಸಿದ ನೋವು ಹಂಚಿಕೊಂಡ ನರ್ಸ್!

ಕೋಲ್ಕತ್ತಾದಲ್ಲಿ ಬಾಡಿಗೆ ವಾಸಸ್ಥಳದಿಂದ ಹೊರಬಂದ ಸೊಮಿಚೊನ್ ಮತ್ತು ಅವರ ಸಹೋದ್ಯೋಗಿ ದಾದಿಯರು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಅಕ್ಕಪಕ್ಕದವರು ಅವರನ್ನು ಭೀತಿಯ ಭಾವನೆಯಿಂದ ನೋಡಿ ಕೊರೋನಾ ಕೊರೋನಾ ಎಂದು ಕರೆಯುತ್ತಾ ತಮ್ಮ ಮುಖ ಮುಚ್ಚಿಕೊಳ್ಳುತ್ತಿದ್ದರಂತೆ.
ಕೋಲ್ಕತ್ತಾ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ವೈ ಸಮಿತಾ
ಕೋಲ್ಕತ್ತಾ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ವೈ ಸಮಿತಾ

ಗುವಾಹಟಿ: ಕೋಲ್ಕತ್ತಾದಲ್ಲಿ ಬಾಡಿಗೆ ವಾಸಸ್ಥಳದಿಂದ ಹೊರಬಂದ ಸೊಮಿಚೊನ್ ಮತ್ತು ಅವರ ಸಹೋದ್ಯೋಗಿ ದಾದಿಯರು ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂತು. ಅಕ್ಕಪಕ್ಕದವರು ಅವರನ್ನು ಭೀತಿಯ ಭಾವನೆಯಿಂದ ನೋಡಿ ಕೊರೋನಾ ಕೊರೋನಾ ಎಂದು ಕರೆಯುತ್ತಾ ತಮ್ಮ ಮುಖ ಮುಚ್ಚಿಕೊಳ್ಳುತ್ತಿದ್ದರಂತೆ.

ಮಣಿಪುರ ಮೂಲದವರಾದ ಇವರು ಕೆಲಸ ಮಾಡುತ್ತಿರುವ ಖಾಸಗಿ ಆಸ್ಪತ್ರೆಯಲ್ಲಿ ಕೂಡ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ.ಆಸ್ಪತ್ರೆಯ ವ್ಯವಸ್ಥಾಪಕರು ಮತ್ತು ನೆರೆಹೊರೆಯವರ ತಾರತಮ್ಯದಿಂದಾಗಿ ಕೋಲ್ಕತ್ತಾದಿಂದ ಸುಮಾರು 300 ದಾದಿಯರು ಕೆಲಸ ಮತ್ತು ನಗರವನ್ನು ತೊರೆದು ಹೋಗಬೇಕಾದ ಪರಿಸ್ಥಿತಿ ಬಂದಿದೆ.

ನಡೆದಿದ್ದೇನು?:22 ವರ್ಷದ ಸೊಮಿಚೊನ್ ಗೆ ಕೊರೋನಾ ಸೋಂಕಿನ ಲಕ್ಷಣ ಕಂಡು ತಮಗೆ ಕೊರೋನಾ ಇರಬಹುದೆಂದು ಆಸ್ಪತ್ರೆಯಲ್ಲಿ ಹೇಳಿದರೂ ಕೂಡ ಅದು ಫ್ಲೂ ಜ್ವರ ಆಗಿರಬಹುದು ಎಂದು ಆಂಟಿಬಯೊಟಿಕ್ ಮಾತ್ರೆಗಳನ್ನು ಕೊಟ್ಟರಂತೆ. ಕೊರೋನಾ ಪರೀಕ್ಷೆ ಮಾಡಲಿಲ್ಲ ಎಂದು ಮಣಿಪುರ ರಾಜಧಾನಿ ಇಂಫಾಲ್ ನ ಜವಹರಲಾಲ್ ನೆಹರೂ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದಲ್ಲಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.

ಕಳೆದ ಮೇ 15ರಂದು ಜ್ವರ ಕಡಿಮೆಯಾಗದೆ ಪರೀಕ್ಷೆ ಮಾಡಿಸಿಕೊಂಡಾಗ ಕೊರೋನಾ ಎಂದು ದೃಢಪಟ್ಟಿತು. ಮಣಿಪುರದ ನಾಗಾ ಜನರು ಹೆಚ್ಚಾಗಿರುವ ಕಮ್ಜೊಂಗ್ ಜಿಲ್ಲೆಯವರಾದ ಈಕೆ ಕಳೆದ ವರ್ಷ ನರ್ಸ್ ಶಿಕ್ಷಣ ಮುಗಿಸಿ ಕೋಲ್ಕತ್ತಾದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು.

ಆಸ್ಪತ್ರೆಯ ಹೀನ ಸ್ಥಿತಿ ಬಗ್ಗೆ ಹೇಳುವ ಅವರು, ಆಸ್ಪತ್ರೆಯಲ್ಲಿ ನಮಗೆ ಯಾವುದೇ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಕೊಟ್ಟಿರಲಿಲ್ಲ, ಸುರಕ್ಷತಾ ಕಿಟ್ ನೀಡಿರಲಿಲ್ಲ, ಕೈ ಗವಸು ಮಾತ್ರ ನೀಡಿದ್ದರು. ನಾನು ಐಸಿಯು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಂದ ಒಬ್ಬ ಕೊರೋನಾ ರೋಗಿಯಿಂದಲೇ ನನಗೆ ಸೋಂಕು ತಗುಲಿರಬೇಕು. ಅಲ್ಲಿನ ತಾರತಮ್ಯ ಮನೋಭಾವ, ವರ್ಣ ತಾರತಮ್ಯ ನೋಡಿ ಬೇಸತ್ತು ಬಿಟ್ಟು ಬಂದಿದ್ದೇನೆ ಎನ್ನುತ್ತಾರೆ.

ನಮಗೆ ವೇತನವನ್ನು ಸರಿಯಾಗಿ ಕೊಟ್ಟಿಲ್ಲ. ಮನೆಯಿಂದ ಹೊರಬಂದರೆ ಜನರು ನಮ್ಮನ್ನು ಭಯದಿಂದ ನೋಡಿ ಓಡಿಹೋಗುತ್ತಾರೆ, ಕೊರೋನಾ ಎಂದು ಕರೆಯುತ್ತಾರೆ ಎಂದು ತಾವು ಪಟ್ಟ ವೇದನೆಯನ್ನು ತೋಡಿಕೊಳ್ಳುತ್ತಾರೆ ಸೊಮಿಚೊನ್.

ಇದು ಸೊಮಿಚೊನ್ ಒಬ್ಬರ ಕಥೆಯಲ್ಲ, ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ವೈ ಸಮಿತಾ, ಮಣಿಪುರ ಭಾಗದ ನರ್ಸ್ ಗಳು ಇಲ್ಲಿ ಬಂದು ಆಸ್ಪತ್ರೆಯಲ್ಲಿ ಮತ್ತು ಹೊರಗೆ ಕೂಡ ತಾರತಮ್ಯ ಅನುಭವಿಸುತ್ತಿರುತ್ತಾರೆ. ದಿನಕ್ಕೆ 12 ಗಂಟೆಗಳ ಕಾಲ ಸುರಕ್ಷಾ ಸಾಧನಗಳಿಲ್ಲದೆ, ಸರಿಯಾಗಿ ಆಹಾರ, ವಸತಿ ವ್ಯವಸ್ಥೆಯಿಲ್ಲದೆ ಆತಂಕ, ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com