ಲಾಕ್ ಡೌನ್ ಸಂಕಷ್ಟದಲ್ಲಿ 1200 ಕಿ.ಮೀ ಸೈಕಲ್ ತುಳಿದಿದ್ದ ಬಾಲಕಿಗೆ ಸೈಕಲ್ ಫೆಡರೇಶನ್‌ನಿಂದ ಬುಲಾವ್!

ಅನಾರೋಗ್ಯಕ್ಕೀಡಾಗಿದ್ದ ತಂದೆಯನ್ನು ಉಳಿಸಿಕೊಳ್ಳುವ ಸಲುವಾಗಿ 15 ವರ್ಷದ ಬಾಲಕಿ ಬರೋಬ್ಬರಿ 1200 ಕಿ.ಮೀ ದೂರ 7 ದಿನಗಳ ಕಾಲ ಸೈಕಲ್ ತುಳಿದು ಆಸ್ಪತ್ರೆಗೆ ದಾಖಲಿಸಿದ್ದಳು. ಇದೇ ಸಾಹಸ ಇದೀಗ ಆಕೆಯ ಬದುಕಿಗೆ ವರವಾಗಿದೆ. 
ಜ್ಯೋತಿ ಕುಮಾರಿ
ಜ್ಯೋತಿ ಕುಮಾರಿ

ಪಾಟ್ನಾ: ಅನಾರೋಗ್ಯಕ್ಕೀಡಾಗಿದ್ದ ತಂದೆಯನ್ನು ಉಳಿಸಿಕೊಳ್ಳುವ ಸಲುವಾಗಿ 15 ವರ್ಷದ ಬಾಲಕಿ ಬರೋಬ್ಬರಿ 1200 ಕಿ.ಮೀ ದೂರ 7 ದಿನಗಳ ಕಾಲ ಸೈಕಲ್ ತುಳಿದು ಆಸ್ಪತ್ರೆಗೆ ದಾಖಲಿಸಿದ್ದಳು. ಇದೇ ಸಾಹಸ ಇದೀಗ ಆಕೆಯ ಬದುಕಿಗೆ ವರವಾಗಿದೆ. 

ಹೌದು, ಸೈಕಲ್ ಫೆಡರೇಷನ್ ಆಫ್ ಇಂಡಿಯಾ(ಸಿಎಫ್ಐ) ಜ್ಯೋತಿ ಕುಮಾರಿಗೆ ಬುಲಾವ್ ಕೊಟ್ಟಿದೆ. ಈ ಮೂಲಕ ಬಾಲಕಿ ಸೈಕ್ಲಿಸ್ಟ್ ಆಗುವ ಸುಸಂದರ್ಭ ಒದಗಿ ಬಂದಿದೆ. 

ಜ್ಯೋತಿ ಕುಮಾರಿಗೆ ಸೈಕ್ಲಿಂಗ್ ಪರೀಕ್ಷೆ ನಡೆಸುತ್ತೇವೆ ಎಂದು ಸಿಎಫ್‌ಐ ಅಧ್ಯಕ್ಷ ಓಂಕಾರ್ ಸಿಂಗ್ ಹೇಳಿದ್ದಾರೆ. ನಾವು ಆ ಹುಡುಗಿಯನ್ನು ದೆಹಲಿಗೆ ಕರೆಸಿಕೊಳ್ಳುತ್ತೇವೆ. ಬಾಲಕಿ ಸೈಕ್ಲಿಂಗ್‌ಗೆ ಯೋಗ್ಯಳಾಗಿದ್ದಾಳೆ ಎಂದು ಪರೀಕ್ಷಿಸಲು ನಾವು ಹಲವು ಪರೀಕ್ಷೆಯನ್ನು ನಡೆಸುತ್ತೇವೆ ಎಂದು ಸಿಂಗ್ ಎಎನ್‌ಐಗೆ ತಿಳಿಸಿದ್ದಾಳೆ. 

ಬಾಲಕಿಗೆ ಸಹನೆ ಜಾಸ್ತಿ ಇದೆ. ಏಕೆಂದರೆ ಅವಳು 1200 ಕಿ.ಮೀ ವ್ಯಾಪ್ತಿಯಲ್ಲಿ ಏಳು ದಿನಗಳ ಕಾಲ ಪ್ರಯಾಣಿಸಿದ್ದಾಳೆ. ಕ್ರೀಡಾಪಟುಗಳಿಗೆ ಸಹನೆ ಬಹು ಮುಖ್ಯ. ಜೊತೆಗೆ ದೈಹಿಕ ಸಾಮರ್ಥ್ಯದ ಬಗ್ಗೆ ಹೊರೆ ಅಚ್ಚುತ್ತೇವೆ. ನಾವು ಬಾಲಕಿಯನ್ನು ಅಕಾಡೆಮಿಯಲ್ಲಿರುವ ಗಣಕೀಕೃತ ಸೈಕಲ್ ಕುಳಿಸಿ ಪರೀಕ್ಷಿಸುತ್ತೇವೆ. ಬಾಲಕಿ ಏಳು ಅಥವಾ ಎಂಟು ಸೈಕ್ಲಿಸ್ಟ್ ಗಳಿಂದ ತಾವು ಸದೃಢವಾಗಿರುವಾಗಿ ಸಾಧಿಸಿ ತೋರಿಸಿದರೆ ನಂತರ ಅವಳು ಅಕಾಡೆಮಿಯಲ್ಲಿ ಯಾವುದೇ ಕರ್ಚಿಲ್ಲದೆ ಉಚಿತವಾಗಿ ತರಬೇತಿ ಪಡೆಯಬಹುದಾಗಿದೆ ಎಂದು ಓಂಕಾರ್ ಸಿಂಗ್ ತಿಳಿಸಿದ್ದರಾೆ. 

ಅಕಾಡೆಮಿಯಲ್ಲಿ 14-15 ವಯಸ್ಸಿನ ಸುಮಾರು 10 ಸೈಕ್ಲಿಸ್ಟ್‌ಗಳನ್ನು ಹೊಂದಿದ್ದೇವೆ. ಆದ್ದರಿಂದ ನಾವು ಯುವ ಪ್ರತಿಭೆಗಳನ್ನು ಪೋಷಿಸಲು ಬಯಸುತ್ತೇವೆ ಎಂದರು. 

ಜ್ಯೋತಿ ಕುಮಾರಿ ಹರ್ಯಾಣದ ಗುರುಗ್ರಾಮ್ ನಿಂದ ಬಿಹಾರದ ದರ್ಬಾಂಗಗೆ ತನ್ನ ತಂದೆಯನ್ನು ಸೈಕಲ್ ನಲ್ಲಿ ಕರೆತಂದಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com