ಕೊರೋನಾ ಜೊತೆ ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ, ಇರಾನ್ ಸಹಕಾರಕ್ಕೆ ಭಾರತ ಮನವಿ

ಮರುಭೂಮಿ ಮಿಡತೆಗಳು ವೇಗವಾಗಿ ವೃದ್ಧಿಯಾಗುತ್ತಿದ್ದು ಇದು ಗಂಭೀರ ಅಪಾಯವನ್ನುಂಟುಮಾಡುತ್ತಿದೆ ಎಂದು ಇದರ ತಡೆಗೆ ಸಮನ್ವಯದ ಮನೋಭಾವ ತೋರಿಸುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್ ಗೆ ಪ್ರಸ್ತಾವನೆ ಸಲ್ಲಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮರುಭೂಮಿ ಮಿಡತೆಗಳು ವೇಗವಾಗಿ ವೃದ್ಧಿಯಾಗುತ್ತಿದ್ದು ಇದು ಗಂಭೀರ ಅಪಾಯವನ್ನುಂಟುಮಾಡಲಿದೆ ಎಂದು ಇದರ ತಡೆಗೆ ಸಂಘಟಿತ ಸಹಕಾರ ತೋರಿಸುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್ ಗೆ ಪ್ರಸ್ತಾವನೆ ಸಲ್ಲಿಸಿದೆ.

ವಿನಾಶಕಾರಿ ವಲಸೆ ಕೀಟಗಳು ಆಫ್ರಿಕಾ ಸೇರಿದಂತೆ ಜಗತ್ತಿನ ಹಲವಾರು ಭಾಗಗಳಲ್ಲಿ ಆಹಾರ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡಿದೆ. ಇದರ ತಡೆಗಟ್ಟುವಿಕೆಗೆ ಸಮನ್ವಯದ ಸಹಕಾರ, ಪ್ರತಿಕ್ರಿಯೆ ನೀಡುವಂತೆ ಭಾರತ ಪಾಕಿಸ್ತಾನ ಮತ್ತು ಇರಾನ್ ನ್ನು ಕೇಳಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭಾರತದ ಪ್ರಸ್ತಾವನೆಗೆ ಇರಾನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಪಾಕಿಸ್ತಾನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಾರತ ತನ್ನ ಸಿಸ್ತಾನ್-ಬಲೂಚಿಸ್ತಾನ್ ಮತ್ತು ದಕ್ಷಿಣ ಖೋರಾಸಾನ್ ಪ್ರಾಂತ್ಯಗಳಲ್ಲಿ ಮರುಭೂಮಿ ಮಿಡತೆಗಳ ಹರಡುವಿಕೆಯನ್ನು ತಡೆಗಟ್ಟಲು ಇರಾನ್‌ಗೆ ಕೀಟನಾಶಕವನ್ನು ಪೂರೈಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಬಲೂಚಿಸ್ತಾನದ ಸಂತಾನೋತ್ಪತ್ತಿ ಪ್ರದೇಶಗಳಿಂದ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ಮರುಭೂಮಿ ಮಿಡತೆಗಳ ಗುಂಪುಗಳು ಭಾರತಕ್ಕೆ ವಲಸೆ ಹೋಗುತ್ತಿವೆ.ಭಾರತದಲ್ಲಿ, ಕಳೆದ ವಾರಗಳಲ್ಲಿ ಹೆಚ್ಚು ಮಿಡತೆಯ ಗುಂಪುಗಳು ಮತ್ತು ಸಣ್ಣ ಹಿಂಡುಗಳು ಪಾಕಿಸ್ತಾನದಿಂದ ರಾಜಸ್ಥಾನದ ಜೋಧಪುರವನ್ನು ತಲುಪಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com