ಅಂಫಾನ್ ಚಂಡಮಾರುತ ಪೀಡಿತ ಒಡಿಶಾಗೆ 500 ಕೋಟಿ ರೂ. ನೆರವು ಘೋಷಿಸಿದ ಪ್ರಧಾನಿ ಮೋದಿ

ಅಂಫಾನ್ ಚಂಡಮಾರುತ ಪೀಡಿತ ಒಡಿಶಾದಲ್ಲಿನ ಪರಿಹಾರ ಕಾರ್ಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 500 ಕೋಟಿ ನೆರವು ಘೋಷಿಸಿದ್ದಾರೆ. 

Published: 22nd May 2020 08:28 PM  |   Last Updated: 22nd May 2020 08:28 PM   |  A+A-


modi-odisha1

ಮೋದಿ - ನವೀನ್ ಪಟ್ನಾಯಕ್

Posted By : Lingaraj Badiger
Source : PTI

ಭುವನೇಶ್ವರ: ಅಂಫಾನ್ ಚಂಡಮಾರುತ ಪೀಡಿತ ಒಡಿಶಾದಲ್ಲಿನ ಪರಿಹಾರ ಕಾರ್ಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 500 ಕೋಟಿ ನೆರವು ಘೋಷಿಸಿದ್ದಾರೆ. 

ಒಡಿಶಾದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಮೋದಿ ಅವರು ಈ ನೆರವು ಘೋಷಿಸಿದ್ದಾರೆ. 

ವೈಮಾನಿಕ ಸಮೀಕ್ಷೆಯ ಬಳಿಕ ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಿ, ಚಂಡಮಾರುತದಿಂದಾದ ಹಾನಿ ಕುರಿತು ರಾಜ್ಯ ಸರ್ಕಾರದಿಂದ ವಿವರವಾದ ವರದಿಯನ್ನು ಪಡೆದ ನಂತರ ದೀರ್ಘಕಾಲೀನ ಪುನರ್ವಸತಿ ಕ್ರಮಗಳಿಗೆ ಮತ್ತಷ್ಟು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕು ಮುನ್ನ ಪಶ್ಚಿಮ ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ, ಅಂಫಾನ್ ಪೀಡಿತ ಬಂಗಾಳಕ್ಕೆ ಒಂದು ಸಾವಿರ ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp