ಕೊರೋನಾಗೆ ಮಗನನ್ನು ಕಳೆದುಕೊಂಡು 17 ದಿನಗಳ ನಂತರ ವೈರಸ್ ನ್ನು ಗೆದ್ದುಬಂದ ಇಂದೋರ್ ನ ಶತಾಯುಷಿ ಅಜ್ಜಿ!

17 ದಿನಗಳ ಹಿಂದೆ ಮಗನನ್ನು ಕಳೆದುಕೊಂಡ ಶತಾಯುಷಿ ಅಜ್ಜಿ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ ಎಂದರೆ ನಂಬಲೇಬೇಕು.
ಕೊರೋನಾ ಗೆದ್ದುಬಂದ ಅಜ್ಜಿ
ಕೊರೋನಾ ಗೆದ್ದುಬಂದ ಅಜ್ಜಿ

ಭೋಪಾಲ್: 17 ದಿನಗಳ ಹಿಂದೆ ಮಗನನ್ನು ಕಳೆದುಕೊಂಡ ಶತಾಯುಷಿ ಅಜ್ಜಿ ಕೊರೋನಾ ಸೋಂಕಿನಿಂದ ಗೆದ್ದು ಬಂದಿದ್ದಾರೆ ಎಂದರೆ ನಂಬಲೇಬೇಕು.

ಮಧ್ಯ ಪ್ರದೇಶದ ಇಂದೋರ್ ನ ನೆಹರೂ ನಗರ ನಿವಾಸಿ 100 ವರ್ಷದ ಅಜ್ಜಿ ಕಳೆದ ಗುರುವಾರ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಗೆದ್ದುಬಂದ 67 ರೋಗಿಗಳಲ್ಲಿ ಒಬ್ಬರು.

ಮೂರು ಗಂಡು ಮಕ್ಕಳ ತಾಯಿಯಾಗಿರುವ 100 ವರ್ಷದ ಈ ಅಜ್ಜಿ ತನ್ನ ಎರಡನೇ ಮಗನನ್ನು ಕಲೆದ ಮೇ 4ರಂದು ಕೊರೋನಾ ಸೋಂಕಿಗೆ ಕಳೆದುಕೊಂಡಿದ್ದರು. ಎರಡು ದಿನಗಳ ಬಳಿಕ 16 ಸದಸ್ಯರ ಕುಟುಂಬದವರನ್ನೆಲ್ಲಾ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಯಿತು.

ಆಗ ಈ ಶತಾಯುಷಿ ಅಜ್ಜಿ, ಆಕೆಯ ಕಿರಿಮಗ, ಮೊಮ್ಮಗ, ಮೊಮ್ಮಗನ ಪತ್ನಿ, ಇಬ್ಬರು ಮೊಮ್ಮಕ್ಕಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರನ್ನೆಲ್ಲಾ ಇಂದೋರ್ ನ ಶ್ರೀ ಅರಬಿಂದೊ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಅವರಲ್ಲಿ ಅಜ್ಜಿ ಜೊತೆಗೆ ಇತರ ನಾಲ್ವರು ಗುಣಮುಖ ಹೊಂದಿ ಬಿಡುಗಡೆಯಾಗಿದ್ದಾರೆ.

ಈ ಅಜ್ಜಿಗೆ ಸಣ್ಣಮಟ್ಟಿಗೆ ಜ್ವರ ಬಿಟ್ಟರೆ ಬೇರೆ ಯಾವ ಲಕ್ಷಣವೂ ಇರಲಿಲ್ಲ. ಬೇರೆ ಹಿರಿಯ ವಯಸ್ಸಿನವರಿಗಾದರೆ ಆಕ್ಸಿಜನ್ ಬೇಕಾಗುತ್ತದೆ. ಆದರೆ ಈ ಅಜ್ಜಿ ಕೆಲ ದಿನಗಳು ಮಾತ್ರ ಆಕ್ಸಿಜನ್ ನೆರವಲ್ಲಿ ಇದ್ದರು. ಅವರ ದೃಢ ಮನಸ್ಸಿನಿಂದಾಗಿಯೇ ಇಷ್ಟು ಗುಣಮುಖರಾಗಿ ಹೊರಬಂದರು ಎಂದು ಆಸ್ಪತ್ರೆಯ ವೈದ್ಯ ಡಾ ರವಿ ದೊಸಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com