ಗರ್ಭಿಣಿ ಮಹಿಳೆಯ ಚಿತ್ರ
ಗರ್ಭಿಣಿ ಮಹಿಳೆಯ ಚಿತ್ರ

ಛತ್ತೀಸ್ ಗಢ: ಚಲಿಸುತ್ತಿದ್ದ ಟ್ರಕ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ!

ಮಧ್ಯಪ್ರದೇಶದಿಂದ ತನ್ನ ಮನೆ ಕಡೆ ವಾಪಸ್ಸಾಗುತ್ತಿದ್ದ ವಲಸಿಗ ಗರ್ಭಿಣಿ ಮಹಿಳೆಯೊಬ್ಬರು ಮಧ್ಯರಾತ್ರಿಯಲ್ಲಿ ಚಲಿಸುತ್ತಿದ್ದ ಟ್ರಕ್ ನಲ್ಲಿಯೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.

ರಾಯಪುರ: ಮಧ್ಯಪ್ರದೇಶದಿಂದ ತನ್ನ ಮನೆ ಕಡೆ ವಾಪಸ್ಸಾಗುತ್ತಿದ್ದ ವಲಸಿಗ ಗರ್ಭಿಣಿ ಮಹಿಳೆಯೊಬ್ಬರು ಮಧ್ಯರಾತ್ರಿಯಲ್ಲಿ ಚಲಿಸುತ್ತಿದ್ದ ಟ್ರಕ್ ನಲ್ಲಿಯೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.

ಮಧ್ಯ ಪ್ರದೇಶದ ಹೋಶಂಗಾಬಾದ್ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ  ಕಾರ್ಮಿಕರಾಗಿದ್ದ  ಸಿಲ್ಫಾರಿ ಗ್ರಾಮದ ಸವನ್ ಪಾಟೀಲ್ ಎಂಬ ಮಹಿಳೆ, ಇತರ ವಲಸಿಗರೊಂದಿಗೆ ತಮ್ಮೂರಿಗೆ ಮರಳುವಾಗ ಟ್ರಕ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

ಛತ್ತೀಸ್ ಗಢದ ಕವರ್ಧ ಜಿಲ್ಲೆಯ ಬೊಡ್ಲಾ ಗ್ರಾಮಕ್ಕೆ ಟ್ರಕ್ ಚಲಿಸುತ್ತಿದ್ದಂತೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ, ಇತರರೊಂದಿಗೆ ಹಂಚಿಕೊಳ್ಳಲು ಹಿಂಜರಿದಿದ್ದಾಳೆ. ನಂತರ ಹೆರಿಗೆ ನೋವು ತೀವ್ರವಾಗುತ್ತಿದ್ದಂತೆ ಆ ಗುಂಪಿನಲ್ಲಿದ್ದ ಏಕೈಕ ಮಹಿಳೆ ಪ್ರಮೀಳಾ ಎಂಬುವರು ಸಹಾಯಕ್ಕೆ ಧಾವಿಸಿದ್ದಾರೆ. ನಂತರ ಸವಾನ್ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಹೆರಿಗೆಯಾದ ನಂತರ ತಾಯಿ ಹಾಗೂ ಮಗುವನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಕೊರೋನಾವೈರಸ್ ಪರೀಕ್ಷೆ ಮಾಡಿದ್ದಾರೆ. ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲಿಸಲಾಗಿದೆ. ತಾಯಿ ಹಾಗೂ ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com